ಭಾರತೀಯ ಅಭಿಮಾನಿಯೊಬ್ಬಳಿಗೆ ಫೆಡರರ್ ಸ್ಪೆಷಲ್ ಗಿಫ್ಟ್! ವಿಡಿಯೋ ವೈರಲ್

First Published Jul 4, 2018, 10:47 AM IST
Highlights
  • 9ನೇ ವಿಂಬಲ್ಡನ್ ಗೆಲುವಿನ ಕನಸಿನಲ್ಲಿರುವ ಟೆನಿಸ್ ಮಾಂತ್ರಿಕ ಫೆಡರರ್
  • ಭಾರತ ಮೂಲದ ಟೆನಿಸ್ ಅಭಿಮಾನಿಗೆ ವಿಶೇಷ ಗಿಫ್ಟ್ ನೀಡುವ ವಿಡಿಯೋ ವೈರಲ್  

ಲಂಡನ್: ಅಂಕಣದಲ್ಲಿ ತಮ್ಮ ಸೊಗಸಾದ ಆಟದ ನೆರವಿನಿಂದ ಗೆದ್ದಿರುವ ಫೆಡರರ್, ಅಂಕಣದ ಹೊರಗೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಹಿಂದೆ ಬಿದ್ದಿಲ್ಲ.

9ನೇ ವಿಂಬಲ್ಡನ್ ಗೆಲುವಿನ ಕನಸಿನಲ್ಲಿರುವ ಫೆಡರರ್, ಈ ಬಾರಿ ಭಾರತ ಮೂಲದ ಟೆನಿಸ್ ಅಭಿಮಾನಿಯೊಬ್ಬಳಿಗೆ ತಮ್ಮ ‘ಹೆಡ್‌ಬ್ಯಾಂಡ್’ ನೀಡಿ ಗಮನ ಸೆಳೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Ask and you shall receive… 🤗  pic.twitter.com/QaEVpNqenB

— Wimbledon (@Wimbledon)

ವಿಡಿಯೋದಲ್ಲಿ ‘ನನಗೆ ನಿಮ್ಮ ಹೆಡ್ ಬ್ಯಾಂಡ್ ಸಿಗುತ್ತದೇಯೇ?’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ನಿಂತಿದ್ದ ಬಾಲಕಿಯನ್ನು ಪಂದ್ಯದ ವೇಳೆ ಗಮನಿಸಿದ್ದ ಫೆಡರರ್, ಹತ್ತಿರ ಬಂದು ತಮ್ಮ ಹೆಡ್‌ಬ್ಯಾಂಡ್ ನೀಡಿದ್ದರು. 

ಈ ವಿಡಿಯೋ ನೋಡಿ ಟ್ವೀಟರ್‌ನಲ್ಲಿ ಬರೆದಿರುವ ಭಾರತ ಸಂಜಾತ ಅಭಿಜೀತ್ ಜೋಶಿ, ‘ಹೆಡ್‌ಬ್ಯಾಂಡ್ ಪಡೆದಿರುವ ಬಾಲಕಿ ನನ್ನ ಮಗಳು. ಫೆಡರರ್‌ನ ದೊಡ್ಡ ಅಭಿಮಾನಿ. ಫೆಡರರ್‌ಗೆ ಧನ್ಯವಾದ’ ಎಂದಿದ್ದಾರೆ.

click me!