
ಲಂಡನ್(ಡಿ.30): ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಬ್ಯಾಟ್ಸ್‌ಮನ್ ಅಲಿಸ್ಟರ್ ಕುಕ್‌ಗೆ ನೈಟ್‌ಹುಡ್ ಗೌರವ ನೀಡಲಾಗುತ್ತಿದೆ. ಹೊಸ ವರ್ಷದಿಂದ ಅವರು ಸರ್.ಅಲಿಸ್ಟರ್ ಕುಕ್ ಎಂದು ಕರೆಸಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
ರಾಷ್ಟ್ರೀಯ ತಂಡದ ಪರ 161 ಟೆಸ್ಟ್‌ಗಳನ್ನು ಆಡಿದ್ದ ಕುಕ್ 12472 ರನ್ ಕಲೆಹಾಕಿದ್ದರು. ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಕುಕ್. 33 ಶತಕ ಬಾರಿಸಿರುವ ಕುಕ್, ಇಂಗ್ಲೆಂಡ್ ತಂಡವನ್ನು ಅತಿಹೆಚ್ಚು ಟೆಸ್ಟ್(59)ಗಳಲ್ಲಿ ಮುನ್ನಡೆಸಿದ ದಾಖಲೆ ಸಹ ಹೊಂದಿದ್ದಾರೆ. ಸರ್ ಇಯಾನ್ ಬಾಥಮ್ ಬಳಿಕ ನೈಟ್‌ಹುಡ್ ಗೌರವಕ್ಕೆ ಪಾತ್ರರಾಗುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗ ಎನ್ನುವ ಹಿರಿಮೆಗೆ ಕುಕ್‌ದಾಗಲಿದೆ.
ಏನಿದು ನೈಟ್‌ಹುಡ್ ಗೌರವ?
ದೇಶಕ್ಕಾಗಿ ವ್ಯಕ್ತಿಯೊಬ್ಬ ನೀಡಿದ ಕೊಡುಗೆಯನ್ನು ಪರಿಗಣಿಸಿ ಬ್ರಿಟಿಷ್ ರಾಜ ಇಲ್ಲವೇ ರಾಣಿ ನೀಡುವ ಬಿರುದಿಗೆ ನೈಟ್‌ಹುಡ್ ಎನ್ನುತ್ತಾರೆ. ಈ ಗೌರವಕ್ಕೆ ಪಾತ್ರರಾದವರು ತಮ್ಮ ಹೆಸರಿನ ಮುಂದೆ ಮಿಸ್ಟರ್ ಬದಲಿಗೆ ಸರ್ ಎಂದು ಹಾಕಿಕೊಳ್ಳಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.