ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ವಿರುದ್ಧ 137 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ

By Web Desk  |  First Published Dec 30, 2018, 9:58 AM IST

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 3 ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ.


ಮೆಲ್ಬರ್ನ್[ಡಿ.30]: ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಬರೋಬ್ಬರಿ 137 ರನ್ ಅಂತರದಿಂದ ಭರ್ಜರಿ ಜಯಗಳಿಸಿದ ಭಾರತ, ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್‌ಗಳ ಸರಣಿಯಲ್ಲಿ 2-1 ಮುನ್ನಡೆ ಗಳಿಸಿದೆ.

ಮಳೆ ಸುರಿದ ಪರಿಣಾಮ 5ನೇ ದಿನದಾಟ ಆರಂಭವಾಗಲು ಕೊಂಚ ವಿಳಂಬವಾದರೂ, ಭಾರತ ಇತಿಹಾಸ ನಿರ್ಮಿಸಲು ತುದಿಗಾಲಲ್ಲಿ ನಿಂತಿತ್ತು. ತನ್ನ ಗೆಲುವಿಗೆ ಅಗತ್ಯವಿದ್ದ ಎರಡು ವಿಕೆಟ್ ಪತನಗೊಳ್ಳುತ್ತಿದ್ದಂತೆಯೇ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿದೆ. 

Tap to resize

Latest Videos

ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಭಾರತದ ಪಾಲಾಗಿತ್ತಾದರೂ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿತ್ತು. ಹೀಗಗಿ ಮೂರನೇ ಪಂದ್ಯ ಎರಡೂ ತಂಡಗಳ ಪಾಲಿಗೆ ನಿರ್ಣಾಯಕವಾಗಿತ್ತು. ಆದರೀಗ ಕೊಹ್ಲಿ ಪಡೆ ಆಸ್ಟ್ರೇಲಿಯಾ ತಂಡವನ್ನು ಹೆಡೆಮುರಿ ಕಟ್ಟುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

 

click me!