ಪೈನ್’ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಪಂತ್

Published : Dec 29, 2018, 05:41 PM IST
ಪೈನ್’ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಪಂತ್

ಸಾರಾಂಶ

ಪೈನ್ ಬ್ಯಾಟಿಂಗ್’ಗಿಳಿದಾಗ, ಇಂದು ಹೊಸ ಅತಿಥಿ ಬಂದಿದ್ದಾರೆ, ಮಯಾಂಕ ನೀನೇನಾದರು ಟೆಂಪ್ರವರಿ ಕ್ಯಾಪ್ಟನ್ಸ್ ನೋಡಿದ್ದೀಯಾ ಎಂದು ಪೈನ್ ಉದ್ದೇಶಿಸಿ ರಿಷಭ್ ಪಂತ್ ಟಾಂಗ್ ನೀಡಿದ್ದಾರೆ.

ಮೆಲ್ಬರ್ನ್‌[ಡಿ.29]: ತನ್ನ ಮಕ್ಕಳನ್ನು ನೋಡಿಕೋ, ನಾನು ನನ್ನ ಗೆಳತಿ ಫಿಲ್ಮ್'ಗೆ ಹೋಗಬೇಕು ಎಂದು ಪಂತ್ ಕಾಲೆಳೆದಿದ್ದ ಟಿಮ್ ಪೈನ್’ಗಿಂದು ಟೀಂ ಇಂಡಿಯಾ ವಿಕೆಟ್ ಕೀಪರ್ ಭರ್ಜರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!

ಪೈನ್ ಬ್ಯಾಟಿಂಗ್’ಗಿಳಿದಾಗ, ಇಂದು ಹೊಸ ಅತಿಥಿ ಬಂದಿದ್ದಾರೆ, ಮಯಾಂಕ ನೀನೇನಾದರು ಟೆಂಪ್ರವರಿ ಕ್ಯಾಪ್ಟನ್ಸ್ ನೋಡಿದ್ದೀಯಾ ಎಂದು ಪೈನ್ ಉದ್ದೇಶಿಸಿ ರಿಷಭ್ ಪಂತ್ ಟಾಂಗ್ ನೀಡಿದ್ದಾರೆ.

ಶುಕ್ರವಾರ ಪಂತ್‌ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಕೀಪರ್‌ ಪೈನ್‌, ‘ಎಂ.ಎಸ್‌.ಧೋನಿ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ನೀನೇಕೆ ಬಂದು ಹೊಬಾರ್ಟ್‌ ಹರಿಕೇನ್ಸ್‌ ಪರ ಬಿಬಿಎಲ್‌ ಆಡಬಾರದು. ಹೇಗಿದ್ದರೂ ತಂಡಕ್ಕೆ ಒಬ್ಬ ಬ್ಯಾಟ್ಸ್‌ಮನ್‌ ಬೇಕಿದೆ. ಆಸ್ಪ್ರೇಲಿಯಾದಲ್ಲಿ ಇನ್ನಷ್ಟು ದಿನ ರಜಾ ದಿನಗಳನ್ನು ಕಳೆಯಬಹುದು. ಹೊಬಾರ್ಟ್‌ ಸುಂದರ ನಗರ. ಜಲಾಭಿಮುಖವಾದ ಅಪಾರ್ಟ್‌ಮೆಂಟ್‌ ನೀಡುತ್ತೇವೆ. ನಿನಗೆ ಮಕ್ಕಳನ್ನು ನೋಡಿಕೊಳ್ಳಲು ಬರುತ್ತದೆ ಅಲ್ವಾ?. ನನ್ನ ಮಕ್ಕಳನ್ನು ನೋಡಿಕೋ, ನಾನು ಪತ್ನಿಯನ್ನು ಸಿನಿಮಾಕ್ಕೆ ಕರೆದೊಯ್ಯಬೇಕಿದೆ’ ಎಂದು ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?