
ಮುಂಬೈ(ಮೇ.24): ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ನಂತರ ಐರ್ಲ್ಯಾಂಡ್ ತಂಡದ ಸ್ಫೋಟಕ ಆಟಗಾರ ಎಡ್ ಜಾಯ್ಸ್ ನಿವೃತ್ತಿ ಘೋಷಿಸಿದ್ದಾರೆ.
ಐರ್ಲ್ಯಾಂಡ್ ತಂಡದ ಪರ ಜಾಯ್ಸ್ 78 ಏಕದಿನದಲ್ಲಿ 41 ರನ್ ಸರಾಸರಿಯಲ್ಲಿ ಅಫ್ಘಾನ್ ವಿರುದ್ಧ 160 ಉತ್ತಮ ರನ್ ನೊಂದಿಗೆ 2151 ರನ್, 18 ಟಿ20 ಪಂದ್ಯಗಳಲ್ಲಿ 27 ಸರಾಸರಿಯೊಂದಿಗೆ 471 ರನ್ ಪೇರಿಸಿದ್ದಾರೆ. 255 ಪಂದ್ಯಗಳ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 47 ಶತಕಗಳೊಂದಿಗೆ 18461 ರನ್ ಹೊಡೆದಿರುವುದು ಶ್ಲಾಘನೀಯ. ಇವುಗಳಲ್ಲಿ ಇಂಗ್ಲೆಂಡ್ ಕೌಂಟಿ ಮಿಡಲ್'ಸೆಕ್ಸ್, ಸಸ್ಸೆಕ್ಸ್ ತಂಡಗಳ ವಿರುದ್ಧ ಆಡಿರುವುದು ಸೇರಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.