ಇತಿಹಾಸ ಸೇರಿದ ದುಲೀಪ್ ಟ್ರೋಫಿ..?

By Suvarna Web DeskFirst Published Aug 20, 2017, 9:13 AM IST
Highlights

2016ರಲ್ಲಿ ಮೊದಲ ಬಾರಿಗೆ ಗುಲಾಬಿ ಬಣ್ಣದ ಚೆಂಡನ್ನು ದುಲೀಪ್ ಟ್ರೋಫಿಯಲ್ಲಿ ಬಳಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂಬೈ(ಆ.20): 2017-18ರ ದೇಸಿ ಕ್ರಿಕೆಟ್ ವೇಳಾಪಟ್ಟಿ ಸಿದ್ಧಗೊಂಡಿದ್ದು, 56 ವರ್ಷಗಳಿಂದ ನಡೆಯುತ್ತಿರುವ ದುಲೀಪ್ ಟ್ರೋಫಿಯನ್ನು ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ವೇಳಾಪಟ್ಟಿಯನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅನುಮೋದಿಸಿದ್ದು ಅ.6ರಿಂದ ರಣಜಿ ಆರಂಭಗೊಳ್ಳಲಿದ್ದು, 2018ರ ಮಾ.18ಕ್ಕೆ ದೇವಧಾರ್ ಟ್ರೋಫಿಯೊಂದಿಗೆ ದೇಸಿ ಋತು ಮುಕ್ತಾಯಗೊಳ್ಳಲಿದೆ. ಭಾರತ, ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್-ಅಕ್ಟೋಬರ್‌'ನಲ್ಲಿ ಸೀಮಿತ ಓವರ್ ಸರಣಿ ಆಡಲಿದ್ದು, ಭಾರತ ‘ಎ’ ತಂಡ ಸಹ ಸರಣಿಯೊಂದರಲ್ಲಿ ಭಾಗಿಯಾಗಲಿದೆ. ಅಗ್ರ ಆಟಗಾರರ ಲಭ್ಯರಿರದ ಕಾರಣ ದುಲೀಪ್ ಟ್ರೋಫಿ ಕೈಬಿಡಲು ನಿರ್ಧರಿಸಲಾಗಿದೆ.

2016ರಲ್ಲಿ ಮೊದಲ ಬಾರಿಗೆ ಗುಲಾಬಿ ಬಣ್ಣದ ಚೆಂಡನ್ನು ದುಲೀಪ್ ಟ್ರೋಫಿಯಲ್ಲಿ ಬಳಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!