ಮಳೆ ಕಾಟ: ದುಲೀಪ್‌ ಟ್ರೋಫಿ ಪಂದ್ಯ ಡ್ರಾ

Published : Aug 21, 2019, 09:18 AM IST
ಮಳೆ ಕಾಟ: ದುಲೀಪ್‌ ಟ್ರೋಫಿ ಪಂದ್ಯ ಡ್ರಾ

ಸಾರಾಂಶ

ದೇಶಿ ಕ್ರಿಕೆಟ್ ಪಂದ್ಯಾವಳಿಗಳ ಮೊದಲ ಟೂರ್ನಿ ಎನಿಸಿರುವ ದುಲೀಪ್ ಟ್ರೋಫಿಯ ಮೊದಲ ಪಂದ್ಯ ಮಳೆಯ ಅಡಚಣೆಯಿಂದಾಗಿ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಆ.21]: ಭಾರತ ಬ್ಲೂ ಹಾಗೂ ಗ್ರೀನ್‌ ನಡುವಿನ ದುಲೀಪ್‌ ಟ್ರೋಫಿ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯವಾಯಿತು. 

ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

4ನೇ ದಿನವಾದ ಮಂಗಳವಾರ ಕೂಡ ಆಟ ನಡೆಸಲು ಸಾಧ್ಯವಾಗಲಿಲ್ಲ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಿಚ್‌ ಹಾಗೂ ಔಟ್‌ಫೀಲ್ಡ್‌ ಸಂಪೂರ್ಣ ಒದ್ದೆಯಾಗಿತ್ತು. ಈ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲು ನಿರ್ಧರಿಸಲಾಯಿತು. 

ದುಲೀಪ್‌ ಟ್ರೋಫಿ: ಪೊರೆಲ್‌ ದಾಳಿಗೆ ಕುಸಿದ ಭಾರತ ಬ್ಲೂ

ಮೊದಲ ದಿನ ಭಾರತ ಬ್ಲೂ ತಂಡ 6 ವಿಕೆಟ್‌ಗೆ 112 ರನ್‌ ಗಳಿಸಿತ್ತು. ಆ.23ರಿಂದ ಭಾರತ ರೆಡ್‌ ಹಾಗೂ ಬ್ಲೂ ತಂಡಗಳ ನಡುವಿನ ಪಂದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆಯಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?
ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!