ಭಾರತ ಮೂಲದ ಶಾಮಿಯ ಅರ್ಝೂ ಜೊತೆ ವಿವಾಹವಾದ ಪಾಕಿಸ್ತಾನ ವೇಗಿ ಹಸನ್ ಆಲಿಯನ್ನು ಸಾನಿಯಾ ಮಾರ್ಜಾ ಕಾಲೆಳೆದಿದ್ದಾರೆ. ಹಸನ್ ಆಲಿಗೆ ಸಾನಿಯ ಹೇಳಿದ್ದೇನು? ಇಲ್ಲಿದೆ ವಿವರ.
ಸೈಲ್‌ಕೋಟ್(ಆ.20): ಪಾಕಿಸ್ತಾನ ವೇಗಿ ಹಸನ್ ಆಲಿ, ಭಾರತೀಯ ಮೂಲದ ಶಾಮಿಯಾ ಅರ್ಝೂ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಹಸನ್ ಆಲಿ 2ನೇ ಇನಿಂಗ್ಸ್ ಆರಂಭಿಸಿದರು. ಹರ್ಯಾಣದ ಮೀವತ್ ಜಿಲ್ಲಿಯ ಶಾಮಿಯಾ, ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಭಾರತೀಯಳನ್ನು ಮದುವೆಯಾದ ಹಸನ್ ಆಲಿಗೆ, ಭಾರತದ ಟೆನಿಸ್ ತಾರೆ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಭಾರತದ ಶಾಮಿಯಾ ಜೊತೆ ಪಾಕ್ ಕ್ರಿಕೆಟಿಗ ಹಸನ್ ಆಲಿ ಮದುವೆ!
ಹಸನ್ ಆಲಿ ಮದುವೆಗೂ ಮುನ್ನ ಟ್ವಿಟರ್‌ನಲ್ಲಿ ಫೋಟ್ ಪೋಸ್ಟ್ ಮಾಡಿದ್ದರು. ಕೊನೆಯ ಬ್ಯಾಚ್ಯುಲರ್ ದಿನ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಾನಿಯಾ, ಹಸನ್ ಆಲಿಗೆ ಶುಭಕೋರಿದ್ದಾರೆ. ಜೀವನ ಪೂರ್ತಿ ಪ್ರೀತಿ ಹಾಗೂ ಸಂತೋಷ ಸಿಗಲೆಂದು ಹಾರೈಸುತ್ತೇನೆ. ಈ ಬಾರಿ ನಮಗೆ ನಂದೂಸ್‌ಗಿಂತ ಹೆಚ್ಚಿನ ಮಟ್ಟದ ಪಾರ್ಟಿ ನೀಡಬೇಕು ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.
Congratulations Hassan ❤️ wish you both a lifetime of love and happiness .. this time you’ll have to treat us to more than Nandos though 😅😅 https://t.co/CEXysWNv4F
— Sania Mirza (@MirzaSania)ಇದನ್ನೂ ಓದಿ: ಭಾರತೀಯಳ ಜೊತೆಗಿನ ಮದುವೆ ಮುನ್ನ ಕಾಶ್ಮೀರ ಕೆಣಕಿದ ಹಸನ್ ಆಲಿ!
ಹಸನ್ ಆಲಿ ಮದುವೆಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು, ಹಸನ್ ಆಲಿ ಕುಟುಂಬಸ್ಥರು, ಆಪ್ತರು ಹಾಗೂ ಗೆಳೆಯರು ಪಾಲ್ಗೊಂಡಿದ್ದಾರೆ. ಇತ್ತ ಶಾಮಿಯ ಕುಟುಂಬಸ್ಥರು ಆಗಸ್ಟ್ 18 ರಂದು ದುಬೈಗೆ ತೆರಳಿದ್ದಾರೆ. ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಕೂಡ ಪಾಲ್ಗೊಂಡಿದ್ದಾರೆ.