ದುಲೀಪ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಲೂ ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ರೆಡ್ ತಂಡದ ಪರ ಕಣಕ್ಕಿಳಿದಿರುವ ಕರುಣ್ ನಾಯರ್ ಅರ್ಧಶತಕದತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಆ.23]: ದುಲೀಪ್ ಟ್ರೋಫಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಲೂ ತಂಡವು ಫೀಲ್ಡಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಆರಂಭಿಸಿರುವ ಭಾರತ ರೆಡ್ ತಂಡವು ಆರಂಭಿಕ ಆಘಾತದಿಂದ ಹೊರಬರುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ಇಲ್ಲಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ರೆಡ್ ಹಾಗೂ ಭಾರತ ಬ್ಲೂ ತಂಡಗಳು ಮುಖಾಮುಖಿಯಾಗಿವೆ. ಬ್ಯಾಟಿಂಗ್ ಆರಂಭಿಸಿದ ಭಾರತ ರೆಡ್ ತಂಡ ಮೊದಲ ಓವರ್’ನಲ್ಲೇ ಆಘಾತ ಅನುಭವಿಸಿತು. ಅಭಿಮನ್ಯು ಈಶ್ವರನ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಹಾಗೂ ಇಂಡಿಯಾ ರೆಡ್ ನಾಯಕ ಪ್ರಿಯಾಂಕ್ ಪಾಂಚಾಲ್ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದೀಗ ಇಂಡಿಯಾ ರೆಡ್ ನಾಯಕ 30 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 75 ರನ್ ಬಾರಿಸಿದೆ. ಕನ್ನಡಿಗ ಕರುಣ್ ನಾಯರ್ 44 ಹಾಗೂ ಅಂಕಿತ್ ಕಲ್ಸಿ 11 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
undefined
ದುಲೀಪ್ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್
ಇಂಡಿಯಾ ಗ್ರೀನ್ ವಿರುದ್ಧ ಬೆಂಚ್ ಕಾದಿದ್ದ ಕರ್ನಾಟಕದ ಆಲ್ರೌಂಡರ್ ಶ್ರೇಯಸ್ ಗೋಪಾಲ್’ಗೆ ಮತ್ತೊಮ್ಮೆ ರೆಸ್ಟ್ ನೀಡಲಾಗಿದೆ. ಇನ್ನು ರೋಹಿತ್ ಮೋರೆಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.
ಮಳೆ ಕಾಟ: ದುಲೀಪ್ ಟ್ರೋಫಿ ಪಂದ್ಯ ಡ್ರಾ
ಭಾರತ ಬ್ಲೂ ಹಾಗೂ ಗ್ರೀನ್ ನಡುವಿನ ಮೊದಲ ಪಂದ್ಯದ ಮೂರುವರೆ ದಿನದಾಟ ಮಳೆಗೆ ಆಹುತಿಯಾಗಿತ್ತು. 49 ಓವರ್ ಮಾತ್ರ ನಡೆದಿದ್ದ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತ್ತು.