Dubai Open 2023: ಸಾನಿಯಾ ಮಿರ್ಜಾಗೆ ಸೋಲಿನ ವಿದಾಯ!

By Kannadaprabha News  |  First Published Feb 22, 2023, 10:16 AM IST

ಎರಡು ದಶಕಗಳ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಬದುಕು ಅಂತ್ಯ
ದುಬೈ ಓಪನ್‌ನ ಮಹಿಳಾ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡ ಸಾನಿಯಾ ಜೋಡಿ
ಆಸ್ಪ್ರೇಲಿಯನ್‌ ಓಪನ್‌ ಬಳಿಕ ಗ್ರ್ಯಾನ್‌ ಸ್ಲಾಂಗೆ ಗುಡ್‌ಬೈ ಹೇಳಿದ್ದ ಸಾನಿಯಾ ಮಿರ್ಜಾ


ದುಬೈ(ಫೆ.22): ಭಾರತದ ದಿಗ್ಗಜ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ 20 ವರ್ಷಗಳ ವೃತ್ತಿಬದುಕನ್ನು ಸೋಲಿನೊಂದಿಗೆ ಮುಕ್ತಾಯಗೊಳಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ದುಬೈ ಓಪನ್‌ನ ಮಹಿಳಾ ಡಬಲ್ಸ್‌ನಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್‌ ಜೊತೆ ಕಣಕ್ಕಿಳಿದ ಸಾನಿಯಾ, ಮೊದಲ ಸುತ್ತಿನಲ್ಲಿ ರಷ್ಯಾದ ಕುಡೆರ್‌ಮೊಟೊವಾ, ಸ್ಯಾಮ್ಸನೊವಾ ಜೋಡಿ ವಿರುದ್ಧ 4-6, 0-6 ಸೆಟ್‌ಗಳಲ್ಲಿ ಸೋಲುಂಡರು.

ಆಸ್ಪ್ರೇಲಿಯನ್‌ ಓಪನ್‌ ಬಳಿಕ ಗ್ರ್ಯಾನ್‌ ಸ್ಲಾಂಗೆ ಗುಡ್‌ಬೈ ಹೇಳಿದ್ದ ಸಾನಿಯಾ, ದುಬೈ ಓಪನ್‌ ಬಳಿಕ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಈ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿದಾಯ ಹೇಳುವ ಅವರ ಆಸೆ ಈಡೇರಲಿಲ್ಲ.

Tap to resize

Latest Videos

2003ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಸಾನಿಯಾ, 2013ರ ವರೆಗೂ ಸಿಂಗಲ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದರು. ಆದರೆ ಅವರಿಗೆ ಹೆಚ್ಚು ಯಶಸ್ಸು ದೊರೆತಿದ್ದು ಡಬಲ್ಸ್‌ ವಿಭಾಗದಲ್ಲಿ. ಮಹಿಳಾ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ತಲಾ 3 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನವನ್ನೂ ಅಲಂಕರಿಸಿದ್ದರು.

Countless memories, one ! ✨ | | pic.twitter.com/ExBQV0j9EJ

— Olympic Khel (@OlympicKhel)

ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೊತೆ 2015ರಲ್ಲಿ ವಿಂಬಲ್ಡನ್‌, ಯುಎಸ್‌ ಓಪನ್‌, 2016ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿದ್ದ ಸಾನಿಯಾ, ಮಹೇಶ್‌ ಭೂಪತಿ ಜೊತೆ 2009ರಲ್ಲಿ ಆಸ್ಪ್ರೇಲಿಯನ್‌ ಓಪನ್‌, 2012ರಲ್ಲಿ ಫ್ರೆಂಚ್‌ ಓಪನ್‌ ಜಯಿಸಿದ್ದರು. 2014ರಲ್ಲಿ ಬ್ರೆಜಿಲ್‌ನ ಬ್ರುನೊ ಸೊರೆಸ್‌ ಜೊತೆ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದರು. ಗ್ರ್ಯಾನ್‌ ಸ್ಲಾಂನ ಮಹಿಳಾ ಡಬಲ್ಸ್‌ನಲ್ಲಿ ಒಮ್ಮೆ, ಮಿಶ್ರ ಡಬಲ್ಸ್‌ನಲ್ಲಿ 5 ಬಾರಿ ರನ್ನರ್‌-ಅಪ್‌ ಕೂಡಾ ಆಗಿದ್ದಾರೆ.

'ಫುಟ್‌ಬಾಲ್‌ ಟೀಮ್‌ಗೆ ಚೆಸ್‌ ಪ್ಲೇಯರ್ ಕೋಚ್‌ ಆದಂಗಾಯ್ತು..' ಆರ್‌ಸಿಬಿ 'ಮೆಂಟರ್‌' ಆಯ್ಕೆಗೆ ತಲೆಕೆರೆದುಕೊಂಡ ಫ್ಯಾನ್ಸ್‌!

ಟೆನಿಸ್‌ ಪಂದ್ಯ ವೀಕ್ಷಿ​ಸಿದ ಸಿಎಂ ಬೊಮ್ಮಾ​ಯಿ

ಬೆಂಗ​ಳೂ​ರು: ಕರ್ನಾ​ಟಕ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ಮಂಗ​ಳ​ವಾರ 5ನೇ ಆವೃತ್ತಿಯ ಬೆಂಗ​ಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ​ ಪಂದ್ಯ​ವನ್ನು ವೀಕ್ಷಿ​ಸಿ​ದರು. ನಗ​ರದ ಕರ್ನಾ​ಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ​(​ಕೆ​ಎ​ಸ್‌​ಎ​ಲ್‌​ಟಿ​ಎ​)ಗೆ ಸಚಿವ, ರಾಜ್ಯ ಟೆನಿಸ್‌ ಸಂಸ್ಥೆ ಅಧ್ಯಕ್ಷ ಆರ್‌.ಅಶೋಕ್‌ ಜೊತೆ​ ಆಗ​ಮಿ​ಸಿದ ಅವ​ರು, ಭಾರ​ತದ ದಿಗ್ಗಜ ಟೆನಿ​ಸಿಗ ವಿಜಯ್‌ ಅಮೃ​ತ​ರಾಜ್‌ ಅವ​ರೊಂದಿಗೆ ಕೆಲ ಕಾಲ ಗ್ಯಾಲ​ರಿ​ಯಲ್ಲಿ ಕುಳಿ​ತು ಪಂದ್ಯ ವೀಕ್ಷಿ​ಸಿ​ದರು.

ಪ್ರಜ್ನೇ​ಶ್‌​, ಪ್ರಜ್ವಲ್‌ಗೆ ಸೋಲಿನ ಆಘಾ​ತ

ಬೆಂಗಳೂರು: ಬೆಂಗ​ಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿ​ಯಲ್ಲಿ ಭಾರತದ ಪ್ರಜ್ನೇಶ್‌ ಗುಣೇಶ್ವರನ್‌, ಕರ್ನಾ​ಟ​ಕದ ಪ್ರಜ್ವಲ್‌ ದೇವ್‌ ಮೊದಲ ಸುತ್ತಿನಲ್ಲೇ ಸೋತು ಹೊರ​ಬಿ​ದ್ದಿ​ದ್ದಾರೆ. ಮಂಗ​ಳ​ವಾರ ಪುರು​ಷರ ಸಿಂಗ​ಲ್ಸ್‌​ನಲ್ಲಿ ದೇವ್‌, ಚೈನೀಸ್‌ ತೈಪೆಯ ಜೇಸನ್‌ ಜಂಗ್‌ ವಿರುದ್ಧ 2-6, 2-6 ಸೆಟ್‌​ಗ​ಳಿಂದ ಪರಾ​ಭ​ವ​ಗೊಂಡರು. 

ಪ್ರಜ್ನೇಶ್‌ ಕ್ರೊವೇ​ಶಿ​ಯಾದ ಹಮದ್‌ ಮೆಡ್‌​ಜೊ​ಡೋ​ವಿಚ್‌ ವಿರುದ್ಧ 3-6, 4-6ರಿಂದ ಸೋಲ​ನು​ಭ​ವಿ​ಸಿ​ದರು. ಹಾಲಿ ವಿಂಬ​ಲ್ಡನ್‌ ಡಬಲ್ಸ್‌ ಚಾಂಪಿ​ಯನ್‌ ಆಸ್ಪ್ರೇ​ಲಿ​ಯಾದ ಮ್ಯಾಕ್ಸ್‌ ಪರ್ಸೆಲ್‌ ಶುಭಾ​ರಂಭ ಮಾಡಿ​ದರು. ಆದರೆ ದಿಗ್ಗಜ ಆಟ​ಗಾರ ಸ್ವಿಡ​ನ್‌ನ ಬ್ಯೊರ್ನ್‌ ಬೊಗ್‌ರ್‍ ಅವರ ಪುತ್ರ ಲಿಯೊ ಬೊಗ್‌ರ್‍ ಆರಂಭಿಕ ಸುತ್ತಲ್ಲೇ ಅಭಿ​ಯಾನ ಕೊನೆ​ಗೊ​ಳಿ​ಸಿ​ದರು.

click me!