ICC Women's T20 Rankings: 16 ಸ್ಥಾನ ಜಿಗಿದ ಆರ್‌ಸಿಬಿ ಆಟಗಾರ್ತಿ ರಿಚಾ ಘೋಷ್‌..!

Published : Feb 21, 2023, 07:02 PM IST
ICC Women's T20 Rankings: 16 ಸ್ಥಾನ ಜಿಗಿದ ಆರ್‌ಸಿಬಿ ಆಟಗಾರ್ತಿ ರಿಚಾ ಘೋಷ್‌..!

ಸಾರಾಂಶ

ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ 16 ಸ್ಥಾನ ಜಿಗಿದ ರಿಚಾ ಘೋಷ್ ಟಾಪ್ 20 ಪಟ್ಟಿಯಲ್ಲಿ ಭಾರತದ ಐವರು ಮಹಿಳಾ ಬ್ಯಾಟರ್‌ಗಳಿಗೆ ಸ್ಥಾನ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ರಿಚಾ ಘೋಷ್

ದುಬೈ(ಫೆ.21): ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌, ನೂತನವಾಗಿ ಬಿಡುಗಡೆಯಾದ ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್‌‌ನಲ್ಲಿ ಬರೋಬ್ಬರಿ 16 ಸ್ಥಾನ ಜಿಗಿತ ಕಂಡು ಟಾಪ್ 20 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ರಿಚಾ ಘೋಷ್ ಕ್ರಮವಾಗಿ ಅಜೇಯ 41 ಹಾಗೂ 47 ರನ್‌ ಬಾರಿಸಿ ಮಿಂಚಿದ್ದರು. 

ಹೌದು, ರಿಚಾ ಘೋಷ್, ವೆಸ್ಟ್‌ ಇಂಡೀಸ್‌ ಎದುರು ಅಜೇಯ 41 ರನ್ ಬಾರಿಸಿದರೆ, ಇಂಗ್ಲೆಂಡ್‌ ಎದುರು ಅಜೇಯ 47 ರನ್ ಸಿಡಿಸಿದ್ದರು.  ಪ್ರದರ್ಶನದ ನೆರವಿನಿಂದ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟಿ20 ರ‍್ಯಾಂಕಿಂಗ್‌‌ನಲ್ಲಿ ಬರೋಬ್ಬರಿ 16 ಸ್ಥಾನ ಜಿಗಿತ ಕಂಡು 20ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಭಾರತದ ಐವರು ಬ್ಯಾಟರ್‌ಗಳು ಟಿ20 ರ‍್ಯಾಂಕಿಂಗ್‌‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ(3), ಶಫಾಲಿ ವರ್ಮಾ(10), ಜೆಮಿಮಾ ರೋಡ್ರಿಗ್ಸ್‌(12) ಹಾಗೂ ಹರ್ಮನ್‌ಪ್ರೀತ್ ಕೌರ್(13) ಟಾಪ್‌ 20 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾದ ತಾಹಿಲಾ ಮೆಗ್ರಾಥ್‌ 802 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿಯೇ ಭದ್ರವಾಗಿದ್ದರೇ, ಕಾಂಗರೂ ಪಡೆಯ ಮತ್ತೋರ್ವ ಬ್ಯಾಟರ್ ಬೆಥ್ ಮೂನಿ 755 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಇನ್ನು ಸ್ಮೃತಿ ಮಂಧನಾ, ಮೆಗ್‌ ಲ್ಯಾನಿಂಗ್ ಹಾಗೂ ಸೋಫಿ ಡಿವೈನ್‌ ಕ್ರಮವಾಗಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

Border Gavaskar Trophy: ಉಳಿದೆರಡು ಟೆಸ್ಟ್‌ ಪಂದ್ಯದಲ್ಲಿ ಡೇವಿಡ್ ವಾರ್ನರ್ ಔಟ್..!

ಇನ್ನು ಬೌಲಿಂಗ್‌ ವಿಭಾಗದಲ್ಲಿಯೂ ಟಾಪ್ 5 ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಗ್ಲೆಂಡ್ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದರೇ, ದಕ್ಷಿಣ ಆಫ್ರಿಕಾದ ಲಾಂಬಾ, ಇಂಗ್ಲೆಂಡ್‌ನ ಸಾರಾ ಗ್ಲೆನ್, ಭಾರತದ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗಷ್ಟೇ ನಡೆದ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ರಿಚಾ ಘೋಷ್‌, ಸ್ಮೃತಿ ಮಂಧನಾ, ಸೋಫಿ ಡಿವೈನ್‌, ರೇಣುಕಾ ಸಿಂಗ್ ಅವರಂತಹ ಟಿ20 ಸ್ಪೆಷಲಿಸ್ಟ್‌ ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!