ಡೋಪಿಂಗ್ ಸಮಸ್ಯೆ ಭಾರತೀಯ ಕ್ರೀಡಾಪಟುಗಳಲ್ಲಿ ಹೆಚ್ಚುತ್ತಿದೆ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನವೇ ಯಶಸ್ಸಿನ ಕೀಲಿ ಎಂದು ಅವರು ಒತ್ತಿ ಹೇಳಿದ್ದಾರೆ. ಡೋಪ್ ಸೇವಿಸಿದರೆ ನಿಷೇಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಉದ್ದೀಪನ ಮದ್ದು ಸೇವನೆ ಎಂಬುದು ಭಾರತದ ಕ್ರೀಡಾಪಟುಗಳಲ್ಲಿ ಅತಿ ದೊಡ್ಡ ಸಮಸ್ಯೆ ಎಂದು ಒಲಿಂಪಿಕ್ ಚಾಂಪಿಯನ್, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಡೋಪಿಂಗ್ ಎಂಬುದು ಒಮ್ಮೆ ಮನಸ್ಸಲ್ಲಿ ಬಂದರೆ, ಅದು ಭವಿಷ್ಯದಲ್ಲಿ ಮತ್ತಷ್ಟು ವ್ಯಾಪಕವಾಗುತ್ತದೆ. ಡೋಪ್ ಇಲ್ಲದಿದ್ದರೆ ಅವರಿಗೆ ಮತ್ತೆ ಆಡಲು ಸಾಧ್ಯವಾಗುವುದಿಲ್ಲ. ಡೋಪ್ ಸೇವಿಸಿದರೆ ಮಾತ್ರ ಅವರ ಕಾರ್ಯಕ್ಷಮತೆ ಹೆಚ್ಚಿಸಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ. ಕಠಿಣ ಪರಿಶ್ರಮ, ಆತ್ಮವಿಶ್ವಾಸ, ತರಬೇತುದಾರ ಸರಿಯಾದ ಮಾರ್ಗದರ್ಶನವೇ ಕ್ರೀಡಾಪಟುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯತ್ತದೆ’ ಎಂದು ಹೇಳಿದ್ದಾರೆ.
ಡೋಪ್ ಸೇವಿಸಿದರೆ 2-4 ವರ್ಷ ನಿಷೇಧಕ್ಕೊಳಗಾಗುತ್ತಾರೆ. ಯಾರಿಗಾದರೂ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಹಂತಕ್ಕೆ ತಲುಪಬೇಕಿದ್ದರೆ ಅವರು ಡೋಪ್ ತೆಗೆದುಕೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.
ಗಾಯಾಳು ಬುಮ್ರಾ ಇಂಗ್ಲೆಂಡ್ ಸರಣಿಗೆ ಅನುಮಾನ: ಚಾಂಪಿಯನ್ಸ್ ಟ್ರೋಫಿಗೆ ಫಿಟ್ ಆಗ್ತಾರಾ?
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.
ಭಾರತ ಖೊ-ಖೊ ತಂಡಕ್ಕೂ ಒಡಿಶಾ ಸರ್ಕಾರ ಸ್ಪಾನ್ಸರ್
ಭುವನೇಶ್ವರ: ಕ್ರೀಡೆಗಳ ಪ್ರೋತ್ಸಾಹ ವಿಚಾರದಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಒಡಿಶಾ ಸರ್ಕಾರ, ಹಾಕಿ ಬಳಿಕ ಭಾರತ ಖೊ ಖೊ ತಂಡಕ್ಕೂ ಪ್ರಾಯೋಜಕತ್ವ ವಹಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಜಿ ಮಾಹಿತಿ ನೀಡಿದ್ದು, ಸರ್ಕಾರ 3 ವರ್ಷಗಳ ಅವಧಿಗೆ, ಒಟ್ಟು 15 ಕೋಟಿ ರು. ನೀಡಲಿದೆ ಎಂದಿದ್ದಾರೆ. ‘ಭಾರತ ಖೊ ಖೊ ತಂಡಕ್ಕೆ 2025ರ ಜನವರಿಯಿಂದ 2027ರ ಡಿಸೆಂಬರ್‌ವರೆಗೆ ಒಡಿಶಾ ಗಣಿಕಾರಿಕೆ ನಿಗಮದ ಮೂಲಕ ವಾರ್ಷಿಕ 5 ಕೋಟಿ ಅನುದಾನ ಒದಗಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಜ.13ರಿಂದ 19ರ ವರೆಗೆ ನವದೆಹಲಿಯಲ್ಲಿ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್ ನಡೆಯಲಿದೆ. ಮಹತ್ವದ ಟೂರ್ನಿಗೂ ಮುನ್ನ ಒಡಿಶಾ ಸರ್ಕಾರ ಪ್ರಾಯೋಜಕತ್ವ ಪಡೆದಿದ್ದು, ಭಾರತ ತಂಡಕ್ಕೆ ಹೆಚ್ಚಿನ ನೆರವು ಒದಗಿಸಲಿದೆ. ಆಟಗಾರರ ಅಭ್ಯಾಸ, ಮೂಲಸೌಕರ್ಯ ಅಭಿವೃದ್ಧಿ, ತರಬೇತಿ ಸಾಮಾಗ್ರಿ ಖರೀದಿ ಹಾಗೂ ದೇಶ, ವಿದೇಶಗಳ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಹಾಯಕವಾಗಲಿದೆ.
ಟೆಸ್ಟ್ ಕ್ರಿಕೆಟ್‌ಗೆ ಹೊಸ ಶೈಲಿ, 2 ದರ್ಜೆಗಳ ಸರಣಿಗೆ ಐಸಿಸಿ ಪ್ಲ್ಯಾನ್: ಏನಿದು ಹೊಸ ಯೋಜನೆ?
ಭಾರತ ಅಥ್ಲೆಟಿಕ್ಸ್ ಸಂಸ್ಥೆಗೆ ಬಹದೂರ್ ಹೊಸ ಅಧ್ಯಕ್ಷ: ಇಂದು ಅವಿರೋಧ ಆಯ್ಕೆ
ಚಂಡೀಗಢ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶಾಟ್‌ಪುಟ್ ಪಟು ಬಹದೂರ್ ಸಾಗೂ ಇನ್ನು ಭಾರತೀಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ. ಮಂಗಳವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗ ಲಿದ್ದಾರೆ.
2012ರಿಂದಲೂ ಅದಿಲೆ ಸುಮರಿವಾಲಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಕ್ರೀಡಾ ನಿಯಮದ ಪ್ರಕಾರ ಅವರು ಇನ್ನು ಚುನಾವಣೆಗೆ ಸ್ಪರ್ಧಿಸು ವಂತಿಲ್ಲ. ಅಥ್ಲೆಟಿಕ್ಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಕಣದಿಂದ ಹಿಂದೆ ಸರಿದ ಕಾರಣ 51 ವರ್ಷದ ಬಹದೂರ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.