ಭಾರತ-ಶ್ರೀಲಂಕಾ ಓಡಾಡಿದ್ದೇ ಬಂತು- ವಿಶ್ವಕಪ್‌ನಲ್ಲಿ ಮಲಿಂಗಾಗಿಲ್ಲ ನಾಯಕತ್ವ!

Published : Apr 17, 2019, 09:04 PM IST
ಭಾರತ-ಶ್ರೀಲಂಕಾ ಓಡಾಡಿದ್ದೇ ಬಂತು- ವಿಶ್ವಕಪ್‌ನಲ್ಲಿ ಮಲಿಂಗಾಗಿಲ್ಲ ನಾಯಕತ್ವ!

ಸಾರಾಂಶ

ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡಸೋ ಕನಸು ಕಂಡಿದ್ದ ಶ್ರೀಲಂಕಾ ವೇಗಿ ಲಸಿತ್ ಮಲಿಂಗಾಗೆ ನಿರಾಸೆಯಾಗಿದೆ. ಬಿಡುವಿಲ್ಲದೆ ಲಂಕಾ ದೇಸಿ ಕ್ರಿಕೆಟ್, ಐಪಿಎಲ್ ಟೂರ್ನಿ ಆಡಿದ ಮಲಿಂಗಾ ಬದಲು ಲಂಕಾ ತಂಡಕ್ಕೆ ನೂತನ ನಾಯಕನ್ನು ಆಯ್ಕೆ ಮಾಡಲಾಗಿದೆ. 

ಕೊಲಂಬೊ(ಏ.17): ವಿಶ್ವಕಪ್ ಟೂರ್ನಿಯಲ್ಲಿ ನಾಯಕತ್ವ ವಹಿಸಲು ಶ್ರೀಲಂಕಾ ದೇಸಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿ ಎಂದು ಅತ್ತ-ಇತ್ತ ಓಡಾಡಿದ ವೇಗಿ ಲಸಿತ್ ಮಲಿಂಗಾಗೆ ನಿರಾಸೆಯಾಗಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡವನ್ನು ದಿಮುತ್ ಕರುಣಾರತ್ನೆ ಮುನ್ನಡೆಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡವನ್ನೂ ಬಿಡದ ನಿಖಿಲ್ ಎಲ್ಲಿದ್ದಿಯಪ್ಪ?

ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಇನ್ನೂ ತಂಡ ಪ್ರಕಟಿಸಿಲ್ಲ. ಆದರೆ ವಿಶ್ವಕಪ್ ತಂಡದ ನಾಯಕ ಯಾರು ಅನ್ನೋದನ್ನು ಆಯ್ಕೆ ಮಾಡಿದೆ. ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಲಸಿತ್ ಮಲಿಂಗ, ಏಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಹಾಗೂ ತಿಸರಾ ಪರೇರಾ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ದಿಮುತ್ ಕರುಣಾರತ್ನೆಗೆ ಅವಕಾಶ ನೀಡಲಾಗಿದೆ ಎಂದು ಲಂಕಾ ಹೇಳಿದೆ.

ಇದನ್ನೂ ಓದಿ: ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ಟೆಸ್ಟ್ ತಂಡದ ನಾಯಕನಾಗಿರುವ ಕರುಣಾರತ್ನೆ, 2015ರ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಪಂದ್ಯ ಆಡಿಲ್ಲ. 17 ಏಕದಿನ ಪಂದ್ಯದಿಂ 190 ರನ್ ಸಿಡಿಸಿರುವ ಕರುಣಾರತ್ನೆ ಆಯ್ಕೆ ಇದೀಗ ಇತರ ಲಂಕಾ ಆಟಗಾರರ ಅಚ್ಚರಿಗೆ ಕಾರಣವಾಗಿದೆ. ಶೀಘ್ರದಲ್ಲೇ ಶ್ರೀಲಂಕಾ ವಿಶ್ವಕಪ್ ತಂಡ ಪ್ರಕಟಗೊಳ್ಳಲಿದೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!