ಫೀಫಾ ರಾಯಭಾರಿಯಾಗಿ ಮರಡೋನಾ

By Suvarna Web DeskFirst Published Feb 10, 2017, 2:20 PM IST
Highlights

56 ವರ್ಷದ ಮರಡೋನ ಅವರನ್ನು ಫುಟ್ಬಾಲ್ ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಫೀಫಾ ಹೇಳಿದೆ

ಲಂಡನ್(ಫೆ.10): ಅರ್ಜೆಂಟೀನಾ ಫುಟ್ಬಾಲ್ ತಂಡದ ಮಾಜಿ ಆಟಗಾರ ಡಿಯಾಗೊ ಮರಡೋನಾ, ಫಿಫಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

‘ಕೊನೆಗೂ ನನ್ನ ಜೀವನದ ಕನಸು ಇದೀಗ ಈಡೇರಲು ಸಾಧ್ಯವಾಗಿದೆ’ ಎಂದು ಮರಡೋನಾ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. 56 ವರ್ಷದ ಮರಡೋನ ಅವರನ್ನು ಫುಟ್ಬಾಲ್ ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಫೀಫಾ ಹೇಳಿದೆ

ಫೀಫಾ ಆಡಳಿತ ಮಂಡಳಿಯ ಮಾಜಿ ಅಧಿಕಾರಿಗಳಾದ ಬೊಕಾ ಜೂನಿಯರ್ಸ್‌, ನಪೋಲಿ ಮತ್ತು ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ನಿಯಮ ಉಲ್ಲಂಘನೆ ಆರೋಪದಲ್ಲಿ 6 ವರ್ಷಗಳ ಕಾಲ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರುಗಳಿಂದಾಗಿ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬಂದಿತ್ತು. ಇದನ್ನು ಹೋಗಲಾಡಿಸುವುದಕ್ಕಾಗಿ ಮಂಡಳಿ ಮರಡೋನಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿದೆ.

click me!