ಬೃಹತ್ ಮೊತ್ತ ದಾಖಲಿಸಿದ ಭಾರತ : ಬಾಂಗ್ಲಾಗೆ ಆರಂಭಿಕ ಆಘಾತ

Published : Feb 10, 2017, 12:24 PM ISTUpdated : Apr 11, 2018, 12:44 PM IST
ಬೃಹತ್ ಮೊತ್ತ ದಾಖಲಿಸಿದ ಭಾರತ : ಬಾಂಗ್ಲಾಗೆ ಆರಂಭಿಕ  ಆಘಾತ

ಸಾರಾಂಶ

1 ದ್ವಿಶತಕ,2 ಶತಕ ಹಾಗೂ 3 ಅರ್ಧ ಶತಕ       ಟೀಮ್ ಇಂಡಿಯಾ ಒಂದೇ ಇನ್ನಿಂಗ್ಸ್​​ನಲ್ಲಿ 687 ರನ್​ ಹೊಡೆಯಿತು. ಇದರಲ್ಲಿ ಒಂದು ದ್ವಿಶತಕ, ಎರಡು ಶತಕ, ಮೂರು ಅರ್ಧಶತಕ ದಾಖಲಾಯಿತು. ಭಾರತೀಯ ಆಟಗಾರರನ್ನು ಕಂಟ್ರೋಲ್ ಮಾಡಲು ಬಾಂಗ್ಲ ಬೌಲರ್'ಗಳಿಂದ ಸಾಧ್ಯವಾಗಲಿಲ್ಲ.

ಹೈದರಾಬಾದ್(ಫೆ.10): ಬಾಂಗ್ಲಾ  ವಿರುದ್ಧ  ಟೀಂ ಇಂಡಿಯಾ 6ವಿಕೆಟ್ ನಷ್ಟಕ್ಕೆ 687 ರನ್  ಬೃಹತ್ ಮೊತ್ತ ದಾಖಲಿಸಿದೆ.  ಮೊದಲ ದಿನದಲ್ಲಿ  3 ವಿಕೆಟ್ ನಷ್ಟಕ್ಕೆ 356 ರನ್'ನೊಂದಿಗೆ  2ನೇ ದಿನದಾಟ ಆರಂಭಿಸಿದ ಭಾರತ ಕೊಹ್ಲಿ  ಹಾಗೂ ಅಜಿಂಕ್ಯ ರಹಾನೆ ಅವರ  ಆಕರ್ಷಕ ಹೊಡೆತಗಳ ಮೂಲಕ 222 ಜೊತೆಯಾಟದೊಂದಿಗೆ  4ನೇ ವಿಕೆಟ್ ನಷ್ಟಕ್ಕೆ 456  ರನ್ ಗಳಿಸಿತು.

ಉತ್ತಮವಾಗಿ ಆಟವಾಡುತ್ತಿದ್ದ  ರಹಾನೆ  133 ಎಸತಗಳಲ್ಲಿ  82 ರನ್ ಗಳಿಸಿ  ತೈಜುಲ್ ಇಸ್ಲಂ'ಗೆ ವಿಕೆಟ್  ಒಪ್ಪಿಸಿದರು.  ನಂತರ ಕ್ರೀಸ್'ಗೆ ಬಂದ ವೃದ್ಧಿಮಾನ್ ಸಹ ಬೌಂಡರಿ, ಸಿಕ್ಸರ್ ಹೊಡೆಯುವ ಮೂಲಕ ಕೊಹ್ಲಿಗೆ ಉತ್ತಮವಾಗಿ ಜೊತೆಯಾದರು.  ವಿರಾಟ್  ದ್ವಿಶತಕ  ಪೂರೈಸಿದ ನಂತರ ಹೆಚ್ಚು ಹೊತ್ತು  ನಿಲ್ಲದೆ  ತೈಜುಲ್ ಇಸ್ಲಂ ಔಟಾದರು.

ನಂತರ  ಅಶ್ವಿನ್  ಜೊತೆ  ಇನ್ನಿಂಗ್ಸ್  ಆರಂಭಿಸಿದ ಸಹ  ಉತ್ತಮವಾಗಿ 74 ರನ್'ಗಳ  ಜೊತೆಯಾಟವಾಡಿದರು.  45 ಎಸತಗಳಲ್ಲಿ 34 ರನ್  ಗಳಿಸಿದ ನಂತರ  ಅಶ್ವಿನ್ ಮೀರಜ್  ಬೌಲಿಂಗ್'ನಲ್ಲಿ  ಸೌಮ್ಯ ಸರ್ಕಾರ್'ಗೆ ಕ್ಯಾಚಿತ್ತು ಪೆವಿಲಿಯನ್'ಗೆ  ತೆರಳಿದರು. ನಂತರ  ರವೀಂದ್ರ ಜಡೇಜಾ 60  ಹಾಗೂ ಸಹ 106 ರನ್  ಹೊಡೆಯುವ ಮೂಲಕ ಅಜೇಯರಾಗಿ ಉಳಿದರು.  ತಂಡ 166 ಓವರ್'ಗಳಲ್ಲಿ  687 ರನ್ ದಾಖಲಿಸಿದ ನಂತರ ನಾಯಕ ಕೊಹ್ಲಿ   ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ 5ನೇ ಗರಿಷ್ಟ ಸ್ಕೋರ್ ಆಯ್ತು.

1 ದ್ವಿಶತಕ,2 ಶತಕ ಹಾಗೂ 3 ಅರ್ಧ ಶತಕ      

ಟೀಮ್ ಇಂಡಿಯಾ ಒಂದೇ ಇನ್ನಿಂಗ್ಸ್​​ನಲ್ಲಿ 687 ರನ್​ ಹೊಡೆಯಿತು. ಇದರಲ್ಲಿ ಒಂದು ದ್ವಿಶತಕ, ಎರಡು ಶತಕ, ಮೂರು ಅರ್ಧಶತಕ ದಾಖಲಾಯಿತು. ಭಾರತೀಯ ಆಟಗಾರರನ್ನು ಕಂಟ್ರೋಲ್ ಮಾಡಲು ಬಾಂಗ್ಲ ಬೌಲರ್'ಗಳಿಂದ ಸಾಧ್ಯವಾಗಲಿಲ್ಲ.

ಬಾಂಗ್ಲಾಕ್ಕೆ  ಆರಂಭಿಕ  ಆಘಾತ

ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ತಮಿಮ್ ಇಕ್ಬಾಲ್ ಹಾಗೂ ಸೌಮ್ಯಾ ಸರ್ಕಾರ್ 38 ರನ್ ಜೊತೆಯಾಟವಾಡಿದರು.  ಆದರೆ ಸರ್ಕಾರ್​ 15 ರನ್ ಗಳಿಸಿದ್ದಾಗ ಉಮೇಶ್ ಯಾದವ್​ಗೆ ವಿಕೆಟ್ ಒಪ್ಪಿಸಿದರು. 2ನೇ ದಿನದಂತ್ಯಕ್ಕೆ ಬಾಂಗ್ಲಾ 1 ವಿಕೆಟ್ ಕಳೆದುಕೊಂಡು 41 ರನ್ ಬಾರಿಸಿದೆ. ಇನ್ನೂ 646 ರನ್ ಹಿನ್ನಡೆಯಲ್ಲಿ ಬಾಂಗ್ಲನ್ನರು ಇದ್ದಾರೆ. ಹೇಗೆ ಲೆಕ್ಕಾಹಾಕಿದ್ರೂ ಭಾರತ ಈ ಟೆಸ್ಟ್ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಇನ್ನು 19 ವಿಕೆಟ್ ಪಡೆಯಬೇಕು.

 

ಸ್ಕೋರ್

ಭಾರತ-ಬಾಂಗ್ಲಾ  ಏಕೈಕ ಟೆಸ್ಟ್​

ಭಾರತ ಮೊದಲ ಇನ್ನಿಂಗ್ಸ್ 687/6 ಡಿ.

2ನೇ ದಿನವೂ ವಿರಾಟ ದರ್ಶನ

1 ದ್ವಿಶತಕ.. 2 ಶತಕ.. 3 ಅರ್ಧಶತಕ..

ಕೊಹ್ಲಿ ದ್ವಿಶತಕ.. ಸಾಹ ಶತಕ..

ಪ್ರೇಕ್ಷಕರನ್ನ ರಂಜಿಸಿದ ಜಡೇಜಾ-ಸಾಹ

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 41/1

ಭಾರತ ಗೆಲುವಿಗೆ 19 ವಿಕೆಟ್ ಬೇಕು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?