
ನವದೆಹಲಿ(ಡಿ.26): ಧೋನಿ ನಿಜಕ್ಕೂ ಆಟದಲ್ಲಿ ಪ್ರಬುದ್ಧತೆ ಕಂಡಿದ್ದಾರೆ. ಅದರಲ್ಲೂ ವಿಕೆಟ್ ಹಿಂದೆ ಧೋನಿ ಅದ್ಭುತ ಆಟಗಾರರಾಗಿದ್ದಾರೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಧೋನಿ ಅವರ ಸಾಮರ್ಥ್ಯವನ್ನು ಪ್ರಶಂಸಿಸಿದ್ದಾರೆ.
ಸದ್ದಿಲ್ಲದೇ ಆಟದ ದಿಕ್ಕನ್ನು ಬದಲಿಸುವ ಧೋನಿ ನಾಯಕತ್ವದಲ್ಲಿ ಭಾರತ 2 ವಿಶ್ವಕಪ್ ಜಯಿಸಿದೆ. ಅಲ್ಲದೇ ಧೋನಿ ಅವರನ್ನು 2019ರ ವಿಶ್ವಕಪ್'ವರೆಗೂ ಧೋನಿ ಭಾರತ ತಂಡದಲ್ಲಿ ಆಡಲಿದ್ದಾರೆ. ಧೋನಿ ಸ್ಥಾನ ತುಂಬಬಲ್ಲ ವಿಕೆಟ್ ಕೀಪರ್'ಗಾಗಿ ಹುಡುಕಾಟ ನಡೆಸುತ್ತಿದ್ದೂ, ಆದರೆ ಧೋನಿಯಷ್ಟು ಯಾರೂ ಸಮರ್ಥರಾಗಿಲ್ಲ. ಅಲ್ಲದೇ ಧೋನಿ ಈಗಲೂ ನಂ.1 ವಿಕೆಟ್ ಕೀಪರ್ ಎನ್ನುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.
ಧೋನಿ ಭಾರತ ತಂಡದಲ್ಲಿ ಆಡುವಾಗ ಮಾತ್ರ ಸಮರ್ಥ ಆಟಗಾರ ಎನಿಸಿಲ್ಲ. ಎಲ್ಲ ಮಾದರಿಯಲ್ಲಿ ಆಡುವಾಗಲೂ ಧೋನಿ ಪ್ರಭಾವಿ ಆಟಗಾರರಾಗಿದ್ದಾರೆ. ಈಗಾಗಲೇ ಇಂಡಿಯಾ ಎ ಸರಣಿಗಳಲ್ಲಿ ಧೋನಿಗೆ ಪರ್ಯಾಯ ವಿಕೆಟ್ ಕೀಪರ್'ಗಳನ್ನು ಹುಡುಕುತ್ತಿದ್ದರೂ, 2019ರ ವಿಶ್ವಕಪ್'ನ ಬಳಿಕವಷ್ಟೇ ಈ ಬಗ್ಗೆ ಯೋಚಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.