ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ ಇತಿಹಾಸ ಬರೆಯಲಿದ್ದಾರೆ ಎಂದಿದ್ದು ಯಾರು ಗೊತ್ತಾ ?

Published : Dec 25, 2017, 10:38 PM ISTUpdated : Apr 11, 2018, 12:50 PM IST
ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ ಇತಿಹಾಸ ಬರೆಯಲಿದ್ದಾರೆ ಎಂದಿದ್ದು ಯಾರು ಗೊತ್ತಾ ?

ಸಾರಾಂಶ

‘ಕೊಹ್ಲಿ, ಸದ್ಯ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಖಂಡಿತವಾಗಿಯೂ ತಂಡ ಇಲ್ಲಿ ಇತಿಹಾಸ ಬರೆಯಲು ಕಾತರಿಸುತ್ತಿದೆ.

ಜೋಹಾನ್ಸ್‌ಬರ್ಗ್(ಡಿ.25): ಮುಂಬರುವ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇತಿಹಾಸ ಬರೆಯಲು ಸಕಲ ಪ್ರಯತ್ನ ನಡೆಸಲಿದೆ ಎಂದು ದಕ್ಷಿಣ ಆಫ್ರಿಕಾದ ತಾರಾ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

‘ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಆಗಮಿಸುತ್ತಿರುವುದು ನನ್ನ ಉತ್ಸಾಹ ಹೆಚ್ಚಿಸಿದೆ’ ಎಂದು ವಿಲಿಯರ್ಸ್‌ ಹೇಳಿದ್ದಾರೆ. ‘ಕೊಹ್ಲಿ, ಸದ್ಯ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಖಂಡಿತವಾಗಿಯೂ ತಂಡ ಇಲ್ಲಿ ಇತಿಹಾಸ ಬರೆಯಲು ಕಾತರಿಸುತ್ತಿದೆ. ಕೊಹ್ಲಿಯನ್ನು ನಾನು ಮೊದಲು ನೋಡಿದ್ದಕ್ಕೂ, ಈಗಲಿಗೂ ಸಾಕಷ್ಟು ಬದಲಾಗಿದ್ದಾರೆ’ ಎಂದು ವಿಲಿಯರ್ಸ್‌, ಕೊಹ್ಲಿ ಗುಣಗಳನ್ನು ಕೊಂಡಾಡಿದ್ದಾರೆ. ‘ಭಾರತ ವಿರುದ್ಧ ಸರಣಿ ಭಾರೀ ಪೈಪೋಟಿಯಿಂದ ಕೂಡಿರಲಿದೆ. ಭಾರತ ತಂಡ ಯುವ ಹಾಗೂ ನಿಷ್ಕೃಷ್ಟ ಆಟಗಾರರಿಂದ ಕೂಡಿದ್ದು, ಸವಾಲಿಗೆ ನಾವು ಸಿದ್ಧರಿದ್ದೇವೆ’ ಎಂದು ಎಬಿಡಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!