ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಡಲು ಧೋನಿ ಕಾರಣ ಅಲ್ವಂತೆ

Published : Sep 23, 2016, 05:10 AM ISTUpdated : Apr 11, 2018, 01:06 PM IST
ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಡಲು ಧೋನಿ ಕಾರಣ ಅಲ್ವಂತೆ

ಸಾರಾಂಶ

ಕಾನ್ಪುರ(ಸೆ.23): 2015ರ ವಿಶ್ವಕಪ್‌‌ ತಂಡದ  ಆಯ್ಕೆ ವೇಳೆಯಲ್ಲಿ ನಾಯಕ ಎಂ.ಎಸ್.ಧೋನಿ ರಾಜಕೀಯ ಮಾಡಿದ್ದಾರೆ, ಉದ್ದೇಶ ಪೂರ್ವಕವಾಗಿ ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. 

ಈ ವಿಚಾರವಾಗಿ ಮಾತನಾಡಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್‌ ಪಾಟೀಲ್‌, ವಿಶ್ವಕಪ್ ತಂಡದಿಂದ ಗಂಭೀರ್, ಯುವಿಯನ್ನು ಕೈ ಬಿಡಲು ಧೋನಿ ಕಾರಣ ಅಲ್ಲ ಎಂದಿದ್ದಾರೆ. 
 
ಟೀಮ್​​ ಇಂಡಿಯಾ ಸೀಮಿತ ಓವರ್​​ಗಳ ನಾಯಕ ಧೋನಿ ಆಯ್ಕೆಗಾರರ ವಿಚಾರದಲ್ಲಿ ಎಂದೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ ಎಂದು ಸಂದೀಪ್‌ ಪಾಟೀಲ್‌ ಹೇಳಿದ್ದಾರೆ. 

ಗೌತಮ್‌ ಗಂಭೀರ್ ಹಾಗೂ ಯುವರಾಜ್‌ ಸಿಂಗ್‌ 2015ರ ವಿಶ್ವಕಪ್‌‌ ನಿಂದ ಹೊರಬೀಳಲು ಧೋನಿ ಕಾರಣ ಎಂಬ ಮಾತುಗಳಿವೆ ಅವು ಸುಳ್ಳು ಎಂದು ಪಾಟೀಲ್ ತಿಳಿಸಿದ್ದಾರೆ. 

ಅಸಲಿಗೆ ಧೋನಿಯನ್ನೇ ನಾಯಕತ್ವದಿಂದ ಕೆಳಗಿಳಿಸಿ ಬೇರೆಯವರಿಗೆ ಆ ಸ್ಥಾನ ನೀಡಲು ಯೋಚಿಸಿದ್ದೆವು. ಆದರೆ, ಇದು ಸರಿಯಾದ ಸಮಯ ಅಲ್ಲ ಎಂದು ಸುಮ್ಮನಿದ್ದೆವು ಅಂತಾನೂ ಸಂದೀಪ್​ ಪಾಟೀಲ್​​ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!
'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!