ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್​: ಭಾರತ 318 ರನ್​ಗಳಿಗೆ ಆಲೌಟ್

Published : Sep 23, 2016, 04:37 AM ISTUpdated : Apr 11, 2018, 12:40 PM IST
ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್​: ಭಾರತ 318 ರನ್​ಗಳಿಗೆ ಆಲೌಟ್

ಸಾರಾಂಶ

ಕಾನ್ಪುರ(ಸೆ.23): ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಹಾಗೂ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ  318 ರನ್​ಗಳಿಗೆ ಆಲೌಟ್​ ಆಗಿದೆ. 

ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಭಾರತೀಯರು ಗಳಿಸಿದ್ದು 291 ರನ್. ಕಳೆದುಕೊಂಡಿದ್ದು 9 ವಿಕೆಟ್. ನ್ಯೂಜಿಲೆಂಡ್ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಗಿತ್ತು. ಇನ್ನು ಎರಡನೇ ದಿನ  ಭಾರತ ಇಂದು ಎಚ್ಚರಿಕೆಯ ಆಟಕ್ಕೆ ಮುಂದಾಯ್ತು. ರವೀಂದ್ರ ಜಡೇಜಾ ಕೆಲ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರು.

10ನೇ ವಿಕೆಟ್​​ಗೆ ಈ ಜೋಡಿ 41 ರನ್​ಗಳಿಸಿತು. ಉಮೇಶ್​ ಯಾದವ್​ 9 ರನ್​ಗಳಿಸಿ ಔಟಾಗುವ ಮೂಲಕ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 318ರನ್​ಗಳಿಗೆ ಆಲೌಟ್​ ಆಯ್ತು. ರವೀಂದ್ರ ಜಡೇಜಾ ಅಜೇಯ 42 ರನ್​ಗಳಿಂದ ಉತ್ತಮ ಆಟ ಪ್ರದರ್ಶಿಸಿದರು. 

ನ್ಯೂಜಿಲೆಂಡ್​ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮಿಚಲ್​ ಸ್ಯಾಂಟ್ನರ್​​ ಮತ್ತು ಟ್ರೇಂಟ್ ಬೋಲ್ಟ್ ತಲಾ ಮೂರು ವಿಕೆಟ್​ ಪಡೆದು ಭಾರತದ ಬ್ಯಾಟಿಂಗ್ ಶಕ್ತಿಯನ್ನು ಕಟ್ಟಿಹಾಕಿದರು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್-19 ಏಷ್ಯಾಕಪ್: ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!
ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!