ನೋಡ ನೋಡುತ್ತಿದ್ದಂತೆ ಹೃದಯಾಘಾತ ಸಾವನ್ನಪ್ಪಿದ ಯುವ ಕುಸ್ತಿಪಟು..!

By Naveen Kodase  |  First Published Sep 28, 2022, 1:20 PM IST

ಯುವ ಕುಸ್ತಿಪಟು ಹೃದಯಾಘಾತದಿಂದ ಕೊನೆಯುಸಿರು
ವಾಕಿಂಗ್ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ
ರಸ್ತೆಯಲ್ಲೇ ಇದ್ದಕ್ಕಿದ್ದಂತೆ ಕುಸಿದುಬಿದ್ದ ಕುಸ್ತಿಪಟು ಸಂಗಪ್ಪ ಬಳಿಗೇರ್


ಧಾರವಾಡ(ಸೆ.28): ಸಾವು ಯಾವ ರೀತಿ ಹಾಗೂ ಹೇಗೆಲ್ಲಾ ಬರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಬೆಳ್ಳಂಬೆಳಗ್ಗೆ ವಾಕಿಂಗ್ ಮುಗಿಸಿ, ಮನೆಗೆ ವಾಪಾಸ್ಸಾಗುತ್ತಿದ್ದ ಯುವ ಕುಸ್ತಿಪಟು ನೋಡ ನೋಡುತ್ತಿದ್ದಂತೆಯೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಪೈಲ್ವಾನ್ ಸಂಗಪ್ಪ ಬಳಿಗೇರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಎದೆ ಝಲ್ ಎನಿಸುವ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ಧಾರವಾಡ ತಾಲೂಕಿನ ದೊಡವಾಡ ಗ್ರಾಮದ ಪೈಲ್ವಾನ್ ಸಂಗಪ್ಪ ಬಳಿಗೇರ್, ತಮ್ಮ ಅಳಿಯನ ಜತೆ ಇಂದು ಮುಂಜಾನೆ ವಾಕಿಂಗ್ ಮಾಡಲು ತೆರಳಿದ್ದಾರೆ. ವಾಕಿಂಗ್ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ಈ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Tap to resize

Latest Videos

 

click me!