ದೇವೇಂದ್ರ ಝಝಾರಿಯಾ 2004, 2016ರ ಪ್ಯಾರಾಲಿಂಪಿಕ್‌ಸ್ಗಳಲ್ಲಿ ಚಿನ್ನ, 2021ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2013ರ ವಿಶ್ವ ಚಾಂಪಿಯನ್ ಶಿಪ್‌ನಲ್ಲೂ ಅವರು ಬಂಗಾರ ಪಡೆದಿದ್ದರು.
ನವದೆಹಲಿ(ಫೆ.29): ಪ್ಯಾರಾಲಿಂಪಿಕ್ಸ್‌ನ 3 ಬಾರಿ ಪದಕ ವಿಜೇತ ತಾರಾ ಜಾವೆಲಿನ್ ಎಸೆತಗಾರ ದೇವೇಂದ್ರ ಝಝಾರಿಯಾ ಭಾರತೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 42ರ ಝಝಾರಿಯಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮಾ.9ರಂದು ಚುನಾವಣೆ ನಡೆಯಲಿದೆ.
ದೇವೇಂದ್ರ ಝಝಾರಿಯಾ 2004, 2016ರ ಪ್ಯಾರಾಲಿಂಪಿಕ್‌ಸ್ಗಳಲ್ಲಿ ಚಿನ್ನ, 2021ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2013ರ ವಿಶ್ವ ಚಾಂಪಿಯನ್ ಶಿಪ್‌ನಲ್ಲೂ ಅವರು ಬಂಗಾರ ಪಡೆದಿದ್ದರು.
ಸಂತೋಷ್ ಟ್ರೋಫಿ: ಕರ್ನಾಟಕ ರೈಲ್ವೇಸ್ ಸೆಣಸಾಟ ಇಂದು
ಯೂಪಿಯಾ(ಅರುಣಾಚಲ ಪ್ರದೇಶ): ಈ ಬಾರಿ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಮೊದಲ ಜಯದ ಹುಟುಕಾಟದಲ್ಲಿರುವ ಹಾಲಿ ಚಾಂಪಿಯನ್ ಕರ್ನಾಟಕ ಗುರುವಾರ ರೈಲ್ವೇಸ್ ವಿರುದ್ಧ ಸೆಣಸಾಡಲಿದೆ. ರಾಜ್ಯ ತಂಡ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿದ್ದು, 2ರಲ್ಲಿ ಡ್ರಾ ಸಾಧಿಸಿದ್ದರೆ, 1 ಪಂದ್ಯದಲ್ಲಿ ಸೋಲನುಭವಿಸಿದೆ. 6 ತಂಡಗಳಿರುವ ‘ಬಿ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕ್ವಾರ್ಟರ್ ಫೈನಲ್ ಆಸೆ ಜೀವಂತ ವಾಗಿರಿಸಿಕೊಳ್ಳಲು ಕೊನೆಯ 2 ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.
ಮುಗಿಯಿತಾ ಈ ನಾಲ್ಕು ಟೀಂ ಇಂಡಿಯಾ ಸ್ಟಾರ್ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು..?
ಎರಡೂ ಪಂದ್ಯಗಳಲ್ಲಿ ಕರ್ನಾಟಕ ಗೆದ್ದರೂ ಇನ್ನುಳಿದ ತಂಡಗಳು ಫಲಿತಾಂಶಗಳ ಆಧಾರದ ಮೇಲೆ ನಾಕೌಟ್ ಭವಿಷ್ಯ ನಿರ್ಧಾರವಾಗಲಿದೆ. ರೈಲ್ವೇಸ್ ಆಡಿರುವ 3 ಪಂದ್ಯಗಳಲ್ಲಿ ತಲಾ 1 ಜಯ, ಡ್ರಾ, ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4ನೇಸ್ಥಾನದಲ್ಲಿದೆ.
WPL ವಾರಿಯರ್ಸ್‌ಗೆ ಮಣಿದ ಮುಂಬೈ
ಬೆಂಗಳೂರು: 2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೊದಲ ಸೋಲು ಅನುಭವಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಮುಂಬೈ, ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 7 ವಿಕೆಟ್ ಸೋಲು ಅನುಭವಿಸಿತು.
ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಯು.ಪಿ.ಗೆ ಇದು ಮೊದಲು ಜಯ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ತಂಡವನ್ನು ನಥಾಲಿ ಸ್ಕೀವರ್ ಮುನ್ನಡೆಸಿದರು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರಲ್ಲಿ 6 ವಿಕೆಟ್‌ಗೆ 161 ರನ್ ಕಲೆಹಾಕಿತು. ಹೇಯ್ಲಿ ಮ್ಯಾಥ್ಯೂಸ್ 55 ರನ್ ಸಿಡಿಸಿ ತಂಡಕ್ಕೆ ನೆರವಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯು.ಪಿ.ಗೆ ಕಿರಣ್ ನವ್ಗೀರೆ ಹಾಗೂ ನಾಯಕಿ ಅಲೀಸಾ ಹೀಲಿ ಸ್ಫೋಟಕ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 9.1 ಓವರಲ್ಲಿ 94 ರನ್ ಸೇರಿಸಿದರು.
Pro Kabaddi League: ಪುಣೇರಿ ಪಲ್ಟನ್ vs ಹರ್ಯಾಣ ಸ್ಟೀಲರ್ಸ್ ಫೈನಲ್ ಫೈಟ್
ಕೇವಲ 25 ಎಸೆತದಲ್ಲಿ ಅರ್ಧಶತಕ ಬಾರಿಸಿದ ಕಿರಣ್, 31 ಎಸೆತದಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 57 ರನ್ ಸಿಡಿಸಿದರು. ಅಲೀಸಾ 33 ರನ್ ಕೊಡುಗೆ ನೀಡಿದರು. ಗ್ರೇಸ್ ಹ್ಯಾರಿಸ್ ಔಟಾಗದೆ 38, ದೀಪ್ತಿ ಶರ್ಮಾ ಔಟಾಗದೆ 27 ರನ್ ಚಚ್ಚಿ ತಂಡವನ್ನು ಇನ್ನೂ 3.3 ಓವರ್ ಬಾಕಿ ಇರುವಂತೆಯೇ ಗೆಲ್ಲಿಸಿದರು.
ಸ್ಕೋರ್:
ಮುಂಬೈ 20 ಓವರಲ್ಲಿ 161/6 (ಮ್ಯಾಥ್ಯೂಸ್ 55, ಯಸ್ತಿಕಾ 26, ಗ್ರೇಸ್
1-20)
ಯು.ಪಿ. 16.3 ಓವರಲ್ಲಿ 163/3 (ಕಿರಣ್ 57, ಗ್ರೇಸ್ 33*, ಇಸ್ಸಿ 2-30)