ಬುಧವಾರ ಸೆಮಿಫೈನಲ್‌ನಲ್ಲಿ ಪುಣೆ ತಂಡ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ ವಿರುದ್ಧ 37-21 ಅಂಕಗಳಿಂದ, ಹರ್ಯಾಣ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-27 ಅಂಕಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದವು. 

- ನಾಸಿರ್ ಸಜಿಪ, ಕನ್ನಡಪ್ರಭ

ಹೈದರಾಬಾದ್(ಫೆ.29) ಒಂದೆಡೆ ಚುರುಕಿನ ರೈಡರ್‌ಗಳು, ಚಾಣಾಕ್ಷ ಡಿಫೆಂಡರ್ ಗಳಿರುವ ಪುಣೇರಿ ಪಲ್ಟನ್. ಮತ್ತೊಂದೆಡೆ ಎದುರಾಳಿ ತಂಡದ ಡಿಫೆನ್ಸ್ ಕೋಟೆಯನ್ನೇ ನಡುಗಿಸಬಲ್ಲ ರೈಡರ್‌ಗಳನ್ನೊಳಗೊಂಡ, ‘ಡಾರ್ಕ್ ಹಾರ್ಸ್’ ಎಂದೇ ಕರೆಯಬಹುದಾದ ಹರ್ಯಾಣ ಸ್ಟೀಲರ್ಸ್. 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಇತ್ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಾಡಲು ಸಜ್ಜಾಗಿವೆ. ಬುಧವಾರ ಸೆಮಿಫೈನಲ್‌ನಲ್ಲಿ ಪುಣೆ ತಂಡ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್‌ ವಿರುದ್ಧ 37-21 ಅಂಕಗಳಿಂದ, ಹರ್ಯಾಣ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 31-27 ಅಂಕಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದವು. 

ಪುಣೆ ಓಟಕ್ಕಿಲ್ಲ ಬ್ರೇಕ್: ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಪುಣೆ ಓಟಕ್ಕೆ ಸೆಮೀಸ್‌ನಲ್ಲೂ ಬ್ರೇಕ್ ಬೀಳಲಿಲ್ಲ. ಮೊದಲ ಸೆಮೀಸ್‌ನ ಪುಣೆ-ಪಾಟ್ನಾ ಕದನದಲ್ಲಿ ಆರಂಭದಲ್ಲಿ ತೀವ್ರ ಪೈಪೋಟಿ ಕಂಡು ಬಂತು. ಪುಣೆ ಏಕಪಕ್ಷೀಯವಾಗಿ ಗೆಲುವು ತನ್ನದಾಗಿಸಿಕೊಂಡಿತು. ಕೊನೆ 20 ನಿಮಿಷದಲ್ಲಿ ಪಾಟ್ನಾ ಒಂದೇ ಒಂದು ಟ್ಯಾಕಲ್ ಅಂಕ ಗಳಿಸಲಿಲ್ಲ. ಅಸ್ಲಾಂ, ಪಂಕಜ್ ತಲಾ 7 ರೈಡ್ ಅಂಕ, ಶಾದ್ಲೂ 5 ಟ್ಯಾಕಲ್ ಅಂಕ ಪಡೆದು ಪುಣೆ ಗೆಲುವಿಗೆ ಕಾರಣರಾದರು. 

Pro Kabaddi League: ಇಂದು ಪುಣೆ vs ಪಾಟ್ನಾ, ಜೈಪುರ vs ಹರ್‍ಯಾಣ ಸೆಮೀಸ್ ಕದನ

ಚೊಚ್ಚಲ ಪ್ರಶಸ್ತಿಗಾಗಿ ನಾಳೆ ರೋಚಕ ಫೈಟ್: ಫೈನಲ್‌ಗೇರಿರುವ ಪಾಟ್ನಾ ಹಾಗೂ ಹರ್ಯಾಣ ಶುಕ್ರವಾರ ಚೊಚ್ಚಲ ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿವೆ. ಪುಣೆ ಕಳೆದ ವರ್ಷವೂ ಫೈನಲ್ ಗೇರಿತ್ತು. ಆದರೆ ಜೈಪುರ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮತ್ತೊಂದೆಡೆ ಚೊಚ್ಚಲ ಫೈನಲ್‌ಗೇರಿರುವ ಹರ್ಯಾಣ ಮೊದಲ ಅವಕಾಶದಲ್ಲೇ ಟ್ರೋಫಿ ಗೆಲ್ಲುವ ತವಕದಲ್ಲಿದೆ. 

Scroll to load tweet…

ಸದ್ದಿಲ್ಲದೆ ಫೈನಲ್ ತಲುಪಿದ ಹರ್ಯಾಣ: ಸೆಮೀಸ್‌ಗೇರಿದ್ದ 4 ತಂಡಗಳ ಪೈಕಿ ಹರ್ಯಾಣ ಫೈನಲ್ ತಲುಪಲಿದೆ ಅಂದುಕೊಂಡವರು ಕಡಿಮೆ. ಲೀಗ್ ಹಂತದಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿದ್ದ ಜೈಪುರ ವಿರುದ್ಧ ಹರ್ಯಾಣ ಯೋಜನಾಬದ್ಧವಾಗಿ ಆಡಿ ಜಯಿಸಿತು. ಮೊದಲಾರ್ಧಕ್ಕೆ 19-13ರಿಂದ ಮುನ್ನಡೆ ಪಡೆದಿದ್ದ ಹರ್ಯಾಣಕ್ಕೆ 2ನೇ ಅವಧಿಯಲ್ಲಿ ಜೈಪುರ ಪ್ರಬಲ ಸ್ಪರ್ಧೆ ನೀಡಿತು. ಆದರೆ ಒತ್ತಡ ನಿಭಾಯಿಸಿ 3ರಿಂದ 5 ಅಂಕಗಳಿಂದ ಕೊನೆವರೆಗೂ ಮುನ್ನಡೆ ಸಾಧಿಸುವಲ್ಲಿ ಸಫಲವಾದ ಹರ್ಯಾಣ ಫೈನಲ್‌ಗೇರಿತು.