Ind vs Eng: ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ಪಂದ್ಯಕ್ಕೂ ಕೆ ಎಲ್ ರಾಹುಲ್ ಡೌಟ್..?

By Naveen Kodase  |  First Published Feb 29, 2024, 10:23 AM IST

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ರಾಹುಲ್‌, ಆ ಬಳಿಕ 3 ಪಂದ್ಯಗಳಿಂದಲೂ ಹೊರಗುಳಿದಿದ್ದರು. ಸದ್ಯ ಅವರು ತಜ್ಞ ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.


ನವದೆಹಲಿ(ಫೆ.29): ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕೆ.ಎಲ್‌.ರಾಹುಲ್‌ ಮಾ.7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ಗೂ ಅಲಭ್ಯರಾಗುವ ಸಾಧ್ಯತೆ ಇದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ರಾಹುಲ್‌, ಆ ಬಳಿಕ 3 ಪಂದ್ಯಗಳಿಂದಲೂ ಹೊರಗುಳಿದಿದ್ದರು. ಸದ್ಯ ಅವರು ತಜ್ಞ ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ 4ನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್‌ ಬುಮ್ರಾ, 5ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಈಗಾಗಲೇ ಸರಣಿ ಗೆದ್ದಿರುವ ಕಾರಣ, 5ನೇ ಪಂದ್ಯಕ್ಕೆ ಇನ್ನೂ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Latest Videos

undefined

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಅಗ್ರ-10ರತ್ತ ಯಶಸ್ವಿ ಜೈಸ್ವಾಲ್‌ ದಾಪುಗಾಲು

ಸದ್ಯ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದು, ಮಾರ್ಚ್ 3ರಂದು ಚಂಡೀಗಢದಲ್ಲಿ ಒಟ್ಟುಗೂಡಲಿದ್ದಾರೆ. ಮಾರ್ಚ್ 4ರಂದು ಭಾರತ ಹಾಗೂ ಇಂಗ್ಲೆಂಡ್‌ ಆಟಗಾರರು ವಿಶೇಷ ವಿಮಾನದಲ್ಲಿ ಧರ್ಮಶಾಲಾಗೆ ತೆರಳಲಿದ್ದಾರೆ.

ಜಹೀರ್ ಖಾನ್ ನೋಡಿ ರಿವರ್ಸ್‌ ಸ್ವಿಂಗ್ ಕಲಿತಿದ್ದೇನೆ: ಜೇಮ್ಸ್ ಆಂಡರ್‌ಸನ್

ನವದೆಹಲಿ: ಇಂಗ್ಲೆಂಡ್‌ನ ಹಿರಿಯ ವೇಗಿ ಜೇಮ್ಸ್ ಆಂಡರ್‌ಸನ್ ತಾವು ಭಾರತದ ಮಾಜಿ ವೇಗಿ ಜಹೀರ್ ಖಾನ್‌ರನ್ನು ನೋಡಿ ರಿವರ್ಸ್‌ ಸ್ವಿಂಗ್ ಬೌಲಿಂಗ್ ಮಾಡುವುದನ್ನು ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ. 

700 ಟೆಸ್ಟ್‌ ವಿಕೆಟ್‌ಗೆ ಇನ್ನು ಕೇವಲ 2 ವಿಕೆಟ್ ದೂರದಲ್ಲಿರುವ ಜೇಮ್ಸ್ ಆಂಡರ್‌ಸನ್, ತಮ್ಮ ಯಶಸ್ಸಿನ ಹಿಂದೆ ಜಹೀರ್ ಖಾನ್ ಪಾತವೂ ಇದೆ ಎನ್ನುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. "ಜಹೀರ್ ಖಾನ್ ನನ್ನ ಅಚ್ಚುಮೆಚ್ಚಿನ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಬೌಲಿಂಗ್ ನೋಡಿ ರಿವರ್ಸ್‌ ಸ್ವಿಂಗ್ ಮಾಡುವುದನ್ನು ಕಲಿತೆ" ಎಂದು ಇಂಗ್ಲೆಂಡ್ ದಿಗ್ಗಜ ವೇಗಿ ಹೇಳಿದ್ದಾರೆ.

ರಾಂಚಿ ಟೆಸ್ಟ್‌ಗೂ ಮುನ್ನ ರಾಹುಲ್ ದ್ರಾವಿಡ್ ಆಡಿದ ಸ್ಪೂರ್ತಿಯ ಮಾತು ಸ್ಮರಿಸಿಕೊಂಡ ಶುಭ್‌ಮನ್ ಗಿಲ್‌..!

ಟೆಸ್ಟ್ ಕ್ರಿಕೆಟ್: ಐರ್ಲೆಂಡ್‌ಗೆ ಮೇಲುಗೈ

ಅಬುಧಾಬಿ: ಆಫ್ಘಾನಿಸ್ತಾನ ವಿರುದ್ಧ ಬುಧವಾರ ಆರಂಭಗೊಂಡ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್ ತಂಡವು ಮೇಲುಗೈ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಫ್ಘಾನಿಸ್ತಾನವನ್ನು 155 ರನ್‌ಗೆ ಆಲೌಟ್ ಮಾಡಿದ ಐರ್ಲೆಂಡ್, ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಐರ್ಲೆಂಡ್ ತಂಡದ ಪರ ಮಾರ್ಕ್ ಅಡೈರ್ 5 ವಿಕೆಟ್ ಕಬಳಿಸಿದರು.

ನ್ಯೂಜಿಲೆಂಡ್‌-ಆಸ್ಟ್ರೇಲಿಯಾ ಮೊದಲ ಟೆಸ್ಟ್‌ ಇಂದಿನಿಂದ

ವೆಲ್ಲಿಂಗ್ಟನ್‌: 8 ವರ್ಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಆಡಲು ಸಜ್ಜಾಗಿದ್ದು, ಉಭಯ ತಂಡಗಳ ನಡುವಿನ 2 ಪಂದ್ಯಗಳ ಸರಣಿ ಗುರುವಾರದಿಂದ ಆರಂಭಗೊಳ್ಳಲಿದೆ. 2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌, ಸರಣಿ ಗೆಲುವಿನ ಮೂಲಕ ತನ್ನ ಸ್ಥಾನ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ, 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಪಟ್ಟಿಯಲ್ಲಿ ಮೇಲೇಳಲು ಕಾಯುತ್ತಿದೆ.
 

click me!