ಡೆನ್ಮಾರ್ಕ್‌ ಓಪನ್‌: ಸಿಂಧು ಸವಾಲು ಸೆಮೀಸಲ್ಲಿ ಅಂತ್ಯ

By Naveen Kodase  |  First Published Oct 22, 2023, 12:13 PM IST

ಶನಿವಾರ ಅಂತಿಮ 4ರ ಸುತ್ತಿನ ಹಣಾಹಣಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ ಸಿಂಧುಗೆ 18-21, 21-19, 7-21ರಲ್ಲಿ ಸೋಲು ಎದುರಾಯಿತು. ಇದು ಮರಿನ್‌ ವಿರುದ್ಧ ಸಿಂಧುಗೆ ಸತತ 5ನೇ ಸೋಲು. ಅಲ್ಲದೆ ಕಳೆದೆರಡು ವಾರಗಳಲ್ಲಿ ಇದು ಸಿಂಧುಗೆ ಎದುರಾದ 2ನೇ ಸೆಮೀಸ್‌ ಸೋಲು.


ಓಡೆನ್ಸ್‌(ಡೆನ್ಮಾರ್ಕ್‌): ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ಮಾಜಿ ವಿಶ್ವ ಚಾಂಪಿಯನ್‌, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಅವರ ಕನಸು ಮತ್ತೆ ಭಗ್ನಗೊಂಡಿದೆ. ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.

ಶನಿವಾರ ಅಂತಿಮ 4ರ ಸುತ್ತಿನ ಹಣಾಹಣಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ವಿರುದ್ಧ ಸಿಂಧುಗೆ 18-21, 21-19, 7-21ರಲ್ಲಿ ಸೋಲು ಎದುರಾಯಿತು. ಇದು ಮರಿನ್‌ ವಿರುದ್ಧ ಸಿಂಧುಗೆ ಸತತ 5ನೇ ಸೋಲು. ಅಲ್ಲದೆ ಕಳೆದೆರಡು ವಾರಗಳಲ್ಲಿ ಇದು ಸಿಂಧುಗೆ ಎದುರಾದ 2ನೇ ಸೆಮೀಸ್‌ ಸೋಲು. ಕಳೆದ ವಾರ ಆರ್ಕ್ಟಿಕ್‌ ಓಪನ್‌ನಲ್ಲೂ ಸೆಮೀಸ್‌ನಲ್ಲಿ ಸೋತಿದ್ದರು. ಸ್ಪೇನ್‌ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌ ಆಗಿದ್ದು ಸಿಂಧು ಅವರ ಈ ವರ್ಷದ ಶ್ರೇಷ್ಠ ಸಾಧನೆ.

Latest Videos

undefined

ಏಷ್ಯಾ ಜೂ. ಬ್ಯಾಡ್ಮಿಂಟನ್‌: ತಾನ್ವಿ, ಆಕಾಶ್‌ ಫೈನಲ್‌ಗೆ

ಚೆಂಗ್‌ಡು(ಚೀನಾ): ಇಲ್ಲಿ ನಡೆಯುತ್ತಿರುವ ಕಿರಿಯರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇಬ್ಬರು ಫೈನಲ್‌ಗೇರಿದ್ದಾರೆ. ಬಾಲಕರ ಅಂಡರ್‌-15 ವಿಭಾಗದಲ್ಲಿ ಬೋರ್ನಿಲ್‌ ಆಕಾಶ್‌, ಬಾಲಕಿಯರ ಅಂಡರ್‌-17 ವಿಭಾಗದಲ್ಲಿ ತಾನ್ವಿ ಶರ್ಮಾ ಫೈನಲ್‌ ತಲುಪಿದರು. ಆಕಾಶ್‌ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಜಗ್‌ಶೇರ್‌ ಸಿಂಗ್‌ ವಿರುದ್ಧ 21-16, 21-12ರಲ್ಲಿ ಜಯಗಳಿಸಿದರು. ಜಗ್‌ಶೇರ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ತಾನ್ವಿ ಥಾಯ್ಲೆಂಡ್‌ನ ಅನಿಪಾಟ್‌ ವಿರುದ್ಧ 21-19, 16-21, 21-11ರಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ತಲುಪಿದರು.

ಪಾರ್ಲಿಮೆಂಟ್ ಎಲೆಕ್ಷನ್ ಇದ್ರೂ ಭಾರತದಲ್ಲೇ ನಡೆಯಲಿದೆ 2024ರ ಐಪಿಎಲ್‌..!

ಧಾರವಾಡ ಓಪನ್‌ ಟೆನಿಸ್‌: ಪ್ರಜ್ವಲ್‌-ನಿತಿನ್‌ಗೆ ಪ್ರಶಸ್ತಿ!

ಧಾರವಾಡ: ಐಟಿಎಫ್‌ ಧಾರವಾಡ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಕರ್ನಾಟಕದ ಪ್ರಜ್ವಲ್‌ ದೇವ್‌-ಪಶ್ಚಿಮ ಬಂಗಾಳದ ನಿತಿನ್‌ ಕುಮಾರ್‌ ಸಿನ್ಹಾ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಶನಿವಾರ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತ ಭಾರತದ ಜೋಡಿ ಶ್ರೇಯಾಂಕ ರಹಿತ ಸಾಯಿ ಪ್ರತೀಕ್‌-ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ 6-4, 6-3ರಲ್ಲಿ ಗೆಲುವು ಸಾಧಿಸಿತು. ಚಾಂಪಿಯನ್‌ ಜೋಡಿಗೆ 1500 ಯುಎಸ್‌ ಡಾಲರ್‌(ಅಂದಾಜು 1.24 ಲಕ್ಷ ರು.)ನಗದು ಬಹುಮಾನ ಲಭಿಸಿತು.

World Cup 2023: ಹಾಲಿ ವಿಶ್ವಕಪ್‌ನ ಅತೀದೊಡ್ಡ ಗೆಲುವು ಕಂಡ ದಕ್ಷಿಣ ಆಫ್ರಿಕಾ, ವಿಶ್ವಚಾಂಪಿಯನ್‌ಗೆ ಮತ್ತೊಂದು ಸೋಲು!

ಇದೇ ವೇಳೆ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ದಿಗ್ವಿಜಯ್‌ ಪ್ರತಾಪ್‌ ಸಿಂಗ್ ಫೈನಲ್‌ಗೇರಿದ್ದು, ಭಾನುವಾರ ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿದ್ದಾರೆ. ಸೆಮಿಫೈನಲ್‌ನಲ್ಲಿ ರಾಮ್‌ಕುಮಾರ್‌ ಅಗ್ರ ಶ್ರೇಯಾಂಕಿತ, ಅಮೆರಿಕದ ನಿಕ್‌ ಚಾಪೆಲ್‌ ವಿರುದ್ಧ ಗೆದ್ದರೆ, ದಿಗ್ವಿಜಯ್‌ 2ನೇ ಶ್ರೇಯಾಂಕಿತ, ರಷ್ಯಾದ ಬೊಗ್ಡನ್‌ ಬೊಬ್ರೊವ್‌ರನ್ನು ಸೋಲಿಸಿ ಫೈನಲ್‌ಗೇರಿದರು.

ಇಂದು ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಆರಂಭ

ಚಾಂಗ್ವೊನ್‌(ದ.ಕೊರಿಯಾ): ಏಷ್ಯನ್‌ ಗೇಮ್ಸ್‌ನಲ್ಲಿ ತೋರಿದ್ದ ಅಭೂತಪೂರ್ವ ಪ್ರದರ್ಶನವನ್ನು ಮುಂದುವರಿಸಲು ಎದುರು ನೋಡುತ್ತಿರುವ ಭಾರತದ ತಾರಾ ಶೂಟರ್‌ಗಳು ಭಾನುವಾರದಿಂದ ಆರಂಭಗೊಳ್ಳಲಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ನ.1ಕ್ಕೆ ಕೂಟ ಮುಕ್ತಾಯಗೊಳ್ಳಲಿದೆ. ಈ ಕೂಟದಲ್ಲಿ 24 ಪ್ಯಾರಿಸ್‌ ಒಲಿಂಪಿಕ್ ಕೋಟಾಗಳು ಲಭ್ಯವಿದ್ದು, ಭಾರತೀಯರು ಗರಿಷ್ಠ ಮಟ್ಟದಲ್ಲಿ ಕೋಟಾ ಗೆಲ್ಲಲು ಸೆಣಸಾಡಲಿದ್ದಾರೆ.

ಭಾರತೀಯರು ಈಗಾಗಲೇ ವಿವಿಧ ಕೂಟಗಳ ಮೂಲಕ 7 ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ಜಯಿಸಿದ್ದಾರೆ. ಆದರೆ ಮನು ಭಾಕರ್‌, ಈಶಾ ಸಿಂಗ್‌, ರಿಧಂ ಸಂಗ್ವಾನ್‌, ಅನೀಶ್‌, ಶಿವ ನರ್ವಾಲ್‌ ಸೇರಿದಂತೆ ಪ್ರಮುಖರು ಕೂಟದಲ್ಲಿ ಒಲಿಂಪಿಕ್ಸ್ ಅರ್ಹತೆಗಾಗಿ ಸೆಣಸಲಿದ್ದಾರೆ.
 

click me!