ದಾಂಪತ್ಯಕ್ಕೆ ಕಾಲಿಟ್ಟ ದೆಹಲಿ ಕ್ರಿಕೆಟಿಗ ರಾಣಾ

Published : Feb 20, 2019, 09:39 AM IST
ದಾಂಪತ್ಯಕ್ಕೆ ಕಾಲಿಟ್ಟ ದೆಹಲಿ ಕ್ರಿಕೆಟಿಗ ರಾಣಾ

ಸಾರಾಂಶ

ದೆಹಲಿ ರಣಜಿ ತಂಡದ ನಾಯಕ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ನಿತೀಶ್ ರಾಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ವಿವಾಹ ಮಹೊತ್ಸವದಲ್ಲಿ ನಿತೀಶ್ ತಮ್ಮ ಬಹುಕಾಲದ ಗೆಳತಿಯನ್ನು ವರಿಸಿದ್ದಾರೆ.

ನವದೆಹಲಿ(ಫೆ.20): ದೆಹಲಿ ರಣಜಿ ಹಾಗೂ ಐಪಿಎಲ್‌ನ ಕೆಕೆಆರ್‌ ತಂಡದ ಆಟಗಾರ ನಿತೀಶ್‌ ರಾಣಾ, ಬಹುಕಾಲದ ಗೆಳತಿ ಸಾಚಿ ಮರ್ವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತೀಶ್‌ ಹಾಗೂ ಸಾಚಿ ಕಳೆದ ವರ್ಷ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ನಡೆದ ಮದುವೆ ಸಮಾರಂಭದಲ್ಲಿ ಕೆಕೆಆರ್‌ ತಂಡದ ಮ್ಯಾನೇಜರ್‌ ವೆಂಕಿ ಮೈಸೂರ್‌ ಸೇರಿದಂತೆ ನಾಯಕ ದಿನೇಶ್‌ ಕಾರ್ತಿಕ್‌, ಸಹ ಆಟಗಾರರು ಭಾಗವಹಿಸಿದ್ದರು.

 

 

ಇದನ್ನೂ ಓದಿ: ರಣಜಿ ನಾಯಕತ್ವದಿಂದ ಕೆಳಗಿಳಿದ ಗಂಭೀರ್-ಹೊಸ ನಾಯಕನ ಆಯ್ಕೆ!

ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ದೆಹಲಿ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು. ಬಳಿಕ ನಿತೀಶ್ ರಾಣ ದೆಹಲಿ ರಣಜಿ ತಂಡವನ್ನ ಮುನ್ನಡೆಸಿದ್ದರು. ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಮಿಂಚಿರುವ ರಾಣ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?