ರಾಷ್ಟ್ರೀಯ ಕ್ರೀಡಾ ದಿನ: ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ!

By Web DeskFirst Published Aug 29, 2019, 8:52 PM IST
Highlights

ಕ್ರೀಡಾ  ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಯನ್ನು ಕ್ರೀಡಾ ಸಾಧಕರಿಗೆ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾ ಸಾಧಕರಿಗೆ ಪ್ರಶಸ್ತಿ ವಿತರಿಸಿದರು.

ನವದೆಹಲಿ(ಆ.29): ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ 114ನೇ ಜನ್ಮದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾ ಸಾಧಕರಿಗೆ   ಪಶಸ್ತಿ ನೀಡಿ ಗೌರವಿಸಿದರು. ಪ್ಯಾರಾ ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದ ದೀಪಾ ಮಲಿಕ್‌ಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ನೀಡಿ ಗೌರವಿಸಿದರು. ರಸ್ಲರ್ ಭಜರಂಗ್ ಪೂನಿಯಾ ತರಬೇತಿಯಲ್ಲಿರುವ ಕಾರಣ ಸಮಾರಂಭಕ್ಕೆ ಗೈರಾದರು.

ಇದನ್ನೂ ಓದಿ: ಇಂದು ರಾಷ್ಟ್ರೀಯ ಕ್ರೀಡಾ ದಿನ; ಸಂಜೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ

ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಜನ್ಮದಿನಾಚರಣೆಯ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ದಿನ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ಅತ್ಯುನ್ನತ ಕ್ರೀಡಾ ಪ್ರಶಸ್ತಿ ವಿತರಿಸಿ ಗೌರವಿಸಲಾಗುತ್ತೆ.   ಭಾರತ ಫುಟ್ಬಾಲ್ ತಂಡದ  ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂದು, ಕಬಡ್ಡಿ ಪಟು ಅಜಯ್ ಠಾಕೂರ್, ಹಾಕಿ ಆಟಗಾರ ಚಿಂಗ್ಲೆಸೇನಾ ಸಿಂಗ್ ಕಂಜುಮ್, ಮಹಿಳಾ ಕ್ರಿಕೆಟ್ ಆಟಗಾರ್ತಿ ಪೂನಮ್ ಯಾದವ್ ಸೇರಿದಂತೆ ಹಲವು ಕ್ರೀಡಾಪಟುಗಳು ರಾಷ್ಟ್ರಪತಿಯಿಂದ ಅರ್ಜುನ ಪ್ರಶಸ್ತಿ ಪಡೆದರು . 

ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ, ಒಟಗಾರ ಮೊಹಮ್ಮದ್ ಅನಾಸ್ ಸೇರಿದಂತೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕೆಲ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರವು ಕಾರಣ ಸಮಾರಂಭಕ್ಕೆ ಗೈರಾದರು. ಬ್ಯಾಡ್ಮಿಂಟನ್ ಕೋಚ್ ವಿಮಲ್ ಕುಮಾರ್ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಗೆದ್ದ ಕ್ರೀಡಾ ಸಾಧಕರ ವಿವರ:

ಖೇಲ್‌ ರತ್ನ ಪ್ರಶಸ್ತಿ
ದೀಪಾ ಮಲಿಕ್‌(ಪ್ಯಾರಾ ಅಥ್ಲೆಟಿಕ್ಸ್‌)
ಭಜರಂಗ್‌ ಪೂನಿಯಾ(ಕುಸ್ತಿ)

ಅರ್ಜುನ ಪ್ರಶಸ್ತಿ
ಗುರ್‌ಪ್ರೀತ್‌ ಸಂಧು( ಫುಟ್ಬಾಲ್‌)
ಅಜಯ್‌ ಠಾಕೂರ್‌(ಕಬಡ್ಡಿ)
ಪೂಜಾ ಧಂಡ ( ಕುಸ್ತಿ)
ಪ್ರಮೋದ್‌ ಭಗತ್‌ ( ಪ್ಯಾರಾ ಬ್ಯಾಡ್ಮಿಂಟನ್‌)
ತೇಜಿಂದರ್‌ ಪಾಲ್‌(ಅಥ್ಲೆಟಿಕ್ಸ್‌)
ಮೊಹಮದ್‌ ಅನಾಸ್‌(ಅಥ್ಲೆಟಿಕ್ಸ್‌)
ಎಸ್‌. ಭಾಸ್ಕರನ್‌( ಬಾಡಿ ಬಿಲ್ಡಿಂಗ್‌)
ಸೋನಿಯಾ ಲಾಥರ್‌( ಬಾಕ್ಸಿಂಗ್‌)
ರವೀಂದ್ರ ಜಡೇಜಾ(ಕ್ರಿಕೆಟ್‌)
ಚಿಂಗ್ಲೆನ್ಸಾನ ಸಿಂಗ್‌(ಹಾಕಿ)
ಗೌರವ್‌ ಗಿಲ್‌(ಮೋಟಾರ್‌ ಸ್ಪೋರ್ಟ್)
ಅಂಜುಮ್‌ ಮೌದ್ಗಿಲ್‌( ಶೂಟಿಂಗ್‌)
ಹರ್ಮೀತ್‌ ದೇಸಾಯಿ( ಟೇಬಲ್‌ ಟೆನಿಸ್‌)
ಫೌವಾದ್‌ ಮಿರ್ಜಾ(ಈಕ್ವೆಸ್ಟ್ರಿಯನ್‌)
ಪೂನಮ್‌ ಯಾದವ್‌(ಕ್ರಿಕೆಟ್‌)
ಸ್ವಪ್ನಾ ಬರ್ಮನ್‌(ಅಥ್ಲೆಟಿಕ್ಸ್‌)
ಸುಂದರ್‌ ಸಿಂಗ್‌(ಪ್ಯಾರಾ ಅಥ್ಲೆಟಿಕ್ಸ್‌)
ಬಿ.ಸಾಯಿ ಪ್ರಣೀತ್‌(ಬ್ಯಾಡ್ಮಿಂಟನ್‌)
ಸಿಮ್ರನ್‌ ಸಿಂಗ್‌(ಪೋಲೋ)

ದ್ರೋಣಾಚಾರ್ಯ ಪ್ರಶಸ್ತಿ
ವಿಮಲ್‌ ಕುಮಾರ್‌( ಬ್ಯಾಡ್ಮಿಂಟನ್‌)
ಮೋಹಿಂದರ್‌ ಸಿಂಗ್‌( ಅಥ್ಲೆಟಿಕ್ಸ್‌)
ಸಂದೀಪ್‌ ಗುಪ್ತಾ(ಟೇಬಲ್‌ ಟೆನಿಸ್‌)

ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ
ಸಂಜಯ್‌ ಭಾರದ್ವಾಜ್‌( ಕ್ರಿಕೆಟ್‌)
ಮೆಹರ್‌ಬಾನ್‌ ಪಟೇಲ್‌(ಹಾಕಿ)
ರಾಮ್‌ಬೀರ್‌ ಸಿಂಗ್‌(ಕಬಡ್ಡಿ)

ಧ್ಯಾನ್‌ಚಂದ್‌ ಪ್ರಶಸ್ತಿ
ಮ್ಯಾನುಯೆಲ್‌ ಫೆಡ್ರಿಕ್ಸ್‌(  ಹಾಕಿ)
ಅರೂಪ್‌ ಬಸಾಕ್‌(ಟೇಬಲ್‌ ಟೆನಿಸ್‌)
ಮನೋಜ್‌ ಕುಮಾರ್‌(ಕುಸ್ತಿ)
ನಿಟ್ಟೆನ್‌ ಕಿರ್ರಟಾನೆ(ಟೆನಿಸ್‌)
ಸಿ.ಲಾಲ್ರೆಮ್ಸಂಗಾ(ಆರ್ಚರಿ)

click me!