ಆಗಸ್ಟ್'ನಲ್ಲಿ ಎಬಿಡಿ ಕ್ರಿಕೆಟ್ ಭವಿಷ್ಯದ ನಿರ್ಧಾರ

Published : Jun 26, 2017, 10:17 PM ISTUpdated : Apr 11, 2018, 12:51 PM IST
ಆಗಸ್ಟ್'ನಲ್ಲಿ ಎಬಿಡಿ ಕ್ರಿಕೆಟ್ ಭವಿಷ್ಯದ ನಿರ್ಧಾರ

ಸಾರಾಂಶ

ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಎಬಿಡಿ ನಾಯಕತ್ವದ ಬಗ್ಗೆಯು ಹಿರಿಯ ಕ್ರಿಕೆಟಿಗರೂ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

ಕಾರ್ಡಿಫ್(ಜೂ.26): ಆಗಸ್ಟ್‌'ನಲ್ಲಿ ತಮ್ಮ ಕ್ರಿಕೆಟ್ ವೃತ್ತಿಬದುಕಿನ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿದ ಬಳಿಕ ಮಾತನಾಡಿದ ಅವರು, ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಜೊತೆ ಮಾತನಾಡಿ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ತಂಡ 1-2 ಅಂತರದಲ್ಲಿ ಸೋತ ಬಳಿಕ, ಡಿವಿಲಿಯರ್ಸ್‌ ತವರಿಗೆ ವಾಪಸ್ಸಾದರು.

ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಕ್ರಿಕೆಟ್ ಸೌತ್ ಆಫ್ರಿಕಾವನ್ನು ಭೇಟಿ ಮಾಡಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ನಿರ್ಧರಿಸುವುದಾಗಿ ಡಿವಿಲಿಯರ್ಸ್‌ ಹೇಳಿದ್ದಾರೆ.

‘ಕ್ರಿಕೆಟ್ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಸದ್ಯಕ್ಕೆ ನಾನು ಕ್ರಿಕೆಟ್‌'ನಿಂದ ದೂರ ಉಳಿಯುವುದೇ ಒಳಿತು ಎಂದೆನಿಸುತ್ತಿದೆ’ ಎಂದು ಎಬಿಡಿ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಎಬಿಡಿ ನಾಯಕತ್ವದ ಬಗ್ಗೆಯು ಹಿರಿಯ ಕ್ರಿಕೆಟಿಗರೂ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾ ಪಾದಾರ್ಪಣೆಗೂ ಮುನ್ನ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದ ಸಚಿನ್ ತೆಂಡೂಲ್ಕರ್..! ಗ್ರೀನ್ ಜೆರ್ಸಿ ತೊಟ್ಟಿದ್ದೇಕೆ ಮಾಸ್ಟರ್ ಬ್ಲಾಸ್ಟರ್?
ಎಂಎಸ್ ಧೋನಿ ಬಳಿ ಇದೆ 70 ಬೈಕ್, ಈ ಪೈಕಿ ಅತೀ ದುಬಾರಿ ಬೈಕ್ ಬೆಲೆ ಕೇಳಿದರೆ ದಂಗಾಗುವುದು ಖಚಿತ