ನಂ.1 ಸ್ಥಾನದಲ್ಲೇ ಮುಂದುವರೆದ ಮರ್ರೆ

By Suvarna Web DeskFirst Published Jun 26, 2017, 8:37 PM IST
Highlights

ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮ್ಯಾಡ್ರಿಡ್(ಜೂ.26): ಬ್ರಿಟನ್ನಿನ ಸ್ಟಾರ್ ಟೆನಿಸ್ ಆಟಗಾರ ಆ್ಯಂಡಿ ಮರ್ರೆ, ಇಂದು ಬಿಡುಗಡೆಯಾದ ಎಟಿಪಿ ವಿಶ್ವ ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ಕ್ವೀನ್ಸ್ ಕ್ಲಬ್ ಟೆನಿಸ್ ಚಾಂಪಿಯನ್‌'ಶಿಪ್‌'ನಲ್ಲಿ ಮರ‌್ರೆ ವಿಶ್ವದ 86ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಜೋರ್ಡಾನ್ ತಾಂಡ್‌ ಎದುರು ಪರಾಭವ ಹೊಂದಿ 23ನೇ ಸುತ್ತಿನಲ್ಲಿ ನಿರ್ಗಮಿಸಿದ್ದರು. ಹೀಗಾಗಿ ಶ್ರೇಯಾಂಕ ಪಟ್ಟಿಯಲ್ಲಿ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಕ್ರೋಯೆಷಿಯಾದ ಮರಿನ್ ಸಿಲಿಕ್ 1 ಸ್ಥಾನ ಮೇಲೆಕ್ಕೆ ಜಿಗಿದು 6ನೇ ಸ್ಥಾನ ಪಡೆದಿದ್ದಾರೆ. ಕೆನಡಾದ ಮಿಲೊಸ್ ರೋನಿಕ್ 1 ಸ್ಥಾನ ಕುಸಿತ ಕಂಡಿದ್ದು 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಉಳಿದಂತೆ ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಟಾಪ್ 10 ಪಟ್ಟಿ ಹೀಗಿದೆ:

ಆ್ಯಂಡಿ ಮರ್ರೆ (ಬ್ರಿಟನ್)

ರಾಫೆಲ್ ನಡಾಲ್ (ಸ್ಪೇನ್)

ಸ್ಟಾನ್ ವಾವ್ರಿಂಕಾ (ಸ್ವಿಟ್ಜರ್'ಲ್ಯಾಂಡ್)

ನೋವಾಕ್ ಜೋಕೊವಿಚ್ (ಸರ್ಬಿಯಾ)

ರೋಜರ್ ಫೆಡರರ್ (ಸ್ವಿಟ್ಜರ್'ಲ್ಯಾಂಡ್)

ಮರಿನ್ ಸಿಲಿಕ್ (ಕ್ರೋಷಿಯಾ)

ಮಿಲೊಸ್ ರೊನಿಕ್ (ಕೆನಡಾ)

ಡೊಮಿನಿಕ್ ಥೀಮ್ (ಆಸ್ಟ್ರೀಯಾ)

ಕೇ ನಿಶಿಕೋರಿ (ಜಪಾನ್)

ಜೋ ವಿಲ್‌'ಫ್ರೆಡ್ ತ್ಸೋಂಗಾ (ಫ್ರಾನ್ಸ್)

click me!