ಇಂದು ನಾಳೆ ಭಾರತ vs ಪಾಕಿಸ್ತಾನ ಡೇವಿಸ್ ಕಪ್ ಟೆನಿಸ್ ಪಂದ್ಯ

By Kannadaprabha News  |  First Published Feb 3, 2024, 12:25 PM IST

ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್ ಕಪ್‌ನಲ್ಲಿ 7 ಬಾರಿ ಆಡಿದ್ದು, ಎಲ್ಲಾ  ಬಾರಿಯೂ ಗೆಲುವು ಸಾಧಿಸಿದೆ. ಈ ಬಾರಿಯೂ ಜಯದ ಕಾತರದಲ್ಲಿರುವ ಭಾರತ ವಿಶ್ವ ಗುಂಪು-1ರಲ್ಲೇ ಉಳಿಯುವ ಗುರಿ ಇಟ್ಟುಕೊಂಡಿದೆ.


ಇಸ್ಲಾಮಾಬಾದ್(ಫೆ.03): ಭಾರತ-ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಗುಂಪು-1 ಪ್ಲೇ-ಆಫ್ ಪಂದ್ಯ ಶನಿವಾರ ಹಾಗೂ ಭಾನುವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಪಾಕಿಸ್ತಾನಕ್ಕೆ 60 ವರ್ಷಗಳ ಬಳಿಕ ಟೆನಿಸ್ ಆಡಲು ತೆರಳಿರುವ ಭಾರತೀಯ ಆಟಗಾರರು, ಪಾಕ್ ವಿರುದ್ಧದ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್ ಕಪ್‌ನಲ್ಲಿ 7 ಬಾರಿ ಆಡಿದ್ದು, ಎಲ್ಲಾ  ಬಾರಿಯೂ ಗೆಲುವು ಸಾಧಿಸಿದೆ. ಈ ಬಾರಿಯೂ ಜಯದ ಕಾತರದಲ್ಲಿರುವ ಭಾರತ ವಿಶ್ವ ಗುಂಪು-1ರಲ್ಲೇ ಉಳಿಯುವ ಗುರಿ ಇಟ್ಟುಕೊಂಡಿದೆ. ಒಂದು ವೇಳೆ ಸೋತರೆ ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆಯಲಿದೆ. ಅತ್ತ ಪಾಕಿಸ್ತಾನ ತಂಡ ತವರಿನ ಲಾಭೆವತ್ತಿ ಮೊದಲ ಬಾರಿ ಭಾರತ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿದೆ. ಶನಿವಾರ 2 ಸಿಂಗಲ್ಸ್, ಭಾನುವಾರ 2 ಸಿಂಗಲ್ಸ್ ಹಾಗೂ 1 ಡಬಲ್ಸ್ ಪಂದ್ಯಗಳು ನಡೆಯಲಿವೆ.

Tap to resize

Latest Videos

undefined

‘ಸಂಬಳ ಕೊಡಿ’: ಬ್ಯಾನರ್‌ ಜತೆ ಸ್ಟೇಡಿಯಂನಲ್ಲಿ ನಿಂತ ಫುಟ್ಬಾಲ್‌ ಕ್ಲಬ್‌ ಸಿಬ್ಬಂದಿ!

ಹೈದರಾಬಾದ್‌: ತಮಗೆ ಬಾಕಿ ಇರುವ ಸಂಬಳವನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ಮಾಜಿ ಚಾಂಪಿಯನ್‌ ಹೈದರಾಬಾದ್‌ ಎಫ್‌ಸಿ ತಂಡದ ಸಿಬ್ಬಂದಿ ಕ್ರೀಡಾಂಗಣದಲ್ಲೇ ಬ್ಯಾನರ್‌ ಹಿಡಿದು ಪ್ರತಿಭಟಿಸಿದ ಪ್ರಸಂಗ ನಡೆದಿದೆ. ಗುರುವಾರ ಗೋವಾ ಎಫ್‌ಸಿ ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್‌ ಧರಿಸಿದ್ದ ಐವರು ಬ್ಯಾನರ್‌ನೊಂದಿಗೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಭದ್ರತಾ ಸಿಬ್ಬಂದಿ ಅಲ್ಲಿಂದ ತೆರವುಗೊಳಿಸಿದ್ದಾರೆ. ಇದರ ಫೋಟೋ, ವಿಡಿಯೋ ವೈರಲ್‌ ಆಗಿದೆ.

ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ: 396ಕ್ಕೆ ಟೀಂ ಇಂಡಿಯಾ ಆಲೌಟ್

ಬ್ಯಾಡ್ಮಿಂಟನ್: ಅಶ್ಮಿತಾ ಸೆಮೀಸ್‌ಗೆ ಲಗ್ಗೆ

ಬ್ಯಾಂಕಾಕ್: ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಶ್ಮಿತಾ ಛಲಿಹಾ ಸೆಮಿಫೈನಲ್ ತಲುಪಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ ಸೋತು ಅಭಿಯಾನ ಕೊನೆಗೊಳಿಸಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಕೂಡಾ ಸೋತು ಹೊರಬಿದ್ದರು.

ಕಬಡ್ಡಿ: ಬೆಂಗಾಲ್, ಹರ್ಯಾಣಕ್ಕೆ ಜಯ

ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಜಯಭೇರಿ ಬಾರಿಸಿವೆ. ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 48-35 ಅಂಕಗಳ ಜಯ ಲಭಿಸಿತು. ತಂಡಕ್ಕಿದು 17 ಪಂದ್ಯಗಳಲ್ಲಿ 7ನೇ ಜಯ. ಅತ್ತ ಡೆಲ್ಲಿ 17ರಲ್ಲಿ 5ನೇ ಸೋಲು ಕಂಡಿದ್ದು, ಒಟ್ಟು 10 ಜಯದೊಂದಿಗೆ ಅಂಕಪಟ್ಟಿಯಲ್ಲಿ ೩ನೇ ಸ್ಥಾನದಲ್ಲೇ ಇದೆ.

ಅಂ-19 ವಿಶ್ವಕಪ್‌ : ನೇಪಾಳ ಮಣಿಸಿ ಸೆಮೀಸ್‌ಗೆ ಭಾರತ ಲಗ್ಗೆ

ಮತ್ತೊಂದು ಪಂದ್ಯದಲ್ಲಿ ಗುಜರಾತನ್ನು ಹರ್ಯಾಣ 34-30 ಅಂಕಗಳಿಂದ ರೋಚಕವಾಗಿ ಮಣಿಸಿತು. ಗುಜರಾತ್ 17ರಲ್ಲಿ 9ನೇ ಸೋಲು ಕಂಡರೆ, ಹರ್ಯಾಣ 10ನೇ ಜಯ ದಾಖಲಿಸಿತು. ಹರ್ಯಾಣದ ವಿನಯ್ 9 ಅಂಕ ಗಳಿಸಿದರು.

ಇಂದಿನ ಪಂದ್ಯ: 
ಯುಪಿ-ಮುಂಬಾ, ರಾತ್ರಿ 8ಕ್ಕೆ
ಡೆಲ್ಲಿ-ಟೈಟಾನ್ಸ್, ರಾತ್ರಿ 9ಕ್ಕೆ

click me!