Davis Cup 203: ರೋಹನ್ ಬೋಪಣ್ಣಗೆ ಗೆಲುವಿನ ವಿದಾಯ..!

Published : Sep 18, 2023, 07:34 AM IST
Davis Cup 203: ರೋಹನ್ ಬೋಪಣ್ಣಗೆ ಗೆಲುವಿನ ವಿದಾಯ..!

ಸಾರಾಂಶ

43 ವರ್ಷದ ಬೋಪಣ್ಣ ಗೆಲುವಿನೊಂದಿಗೆ ತಮ್ಮ 2 ದಶಕಗಳ ಡೇವಿಸ್‌ ಕಪ್‌ ಪಯಣಕ್ಕೆ ವಿದಾಯ ಹೇಳಿದರು. 2002ರಲ್ಲಿ ಡೇವಿಸ್‌ ಕಪ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ 33 ಮುಖಾಮುಖಿಗಳಲ್ಲಿ 50 ಪಂದ್ಯಗಳನ್ನಾಡಿದ್ದು, ಒಟ್ಟು 23 ಗೆಲುವು ಸಾಧಿಸಿದ್ದಾರೆ. ಡಬಲ್ಸ್‌ನಲ್ಲಿ ಅವರು 13 ಪಂದ್ಯಗಳಲ್ಲಿ ಗೆದ್ದಿದ್ದರೆ ಇನ್ನುಳಿದ 10 ಗೆಲುವು ಸಿಂಗಲ್ಸ್‌ನಲ್ಲಿ ಬಂದಿವೆ.

ಲಖನೌ(ಸೆ.18): ಮೊರಾಕ್ಕೊ ವಿರುದ್ಧ ವಿಶ್ವ ಗುಂಪು-2 ಪಂದ್ಯವನ್ನು 4-1ರಲ್ಲಿ ಗೆದ್ದ ಭಾರತ ತಂಡ ಟೆನಿಸ್‌ ವಿಶ್ವಕಪ್‌ ಎಂದೇ ಕರೆಸಿಕೊಳ್ಳುವ ಡೇವಿಸ್‌ ಕಪ್‌ ಟೂರ್ನಿಯಲ್ಲಿ ವಿಶ್ವ ಗುಂಪು-1 ಪ್ಲೇ-ಆಫ್‌ ಹಂತಕ್ಕೆ ಅರ್ಹತೆ ಪಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿಗ್ಗಜ ಟೆನಿಸಿಗ ರೋಹನ್‌ ಬೋಪಣ್ಣಗೆ ಡೇವಿಸ್‌ ಕಪ್‌ನಲ್ಲಿ ಗೆಲುವಿನ ವಿದಾಯ ಸಿಕ್ಕಿದೆ.

ಮೊದಲ ದಿನ 1-1ರಲ್ಲಿ ಸಮಗೊಂಡಿದ್ದ ಉಭಯ ತಂಡಗಳ ಹಣಾಹಣಿ, 2ನೇ ದಿನ ಭಾರತದ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. ಭಾನುವಾರ ನಡೆದ ಡಬಲ್ಸ್‌ ಹಾಗೂ ಎರಡು ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ಭಾರತದ ಪಾಲಾದವು. ಡಬಲ್ಸ್‌ನಲ್ಲಿ ಕರ್ನಾಟಕದ ರೋಹನ್‌ ಬೋಪಣ್ಣ ಹಾಗೂ ಯೂಕಿ ಭಾಂಬ್ರಿ ಜೋಡಿ ಮೊರಾಕ್ಕೊದ ಎಲಿಯಟ್‌ ಬೆನ್ಚೆಟ್ರಿಟ್‌-ಯೂನೆಸ್‌ ಲಲಾಮಿ ವಿರುದ್ಧ 6-2, 6-1 ಅಂತರದಲ್ಲಿ ಗೆಲುವು ಸಾಧಿಸಿತು. ಬಳಿಕ ರಿವರ್ಸ್‌ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸುಮಿತ್‌ ನಗಾಲ್‌ 6-3, 6-3ರಲ್ಲಿ ಯಾಸಿನ್‌ ದಿಲಿಮಿ ವಿರುದ್ಧ ಗೆದ್ದರೆ, 2ನೇ ಪಂದ್ಯದಲ್ಲಿ ದಿಗ್ವಿಜಯ್‌ ಪ್ರತಾಪ್‌ 6-1, 5-7, 10-6ರಲ್ಲಿ ವಾಲಿದ್‌ ಅಹೌದ ವಿರುದ್ಧ ಜಯಿಸಿದರು.

2 ದಶಕಗಳ ಪಯಣಕ್ಕೆ ಬೋಪಣ್ಣ ಗುಡ್‌ಬೈ!

43 ವರ್ಷದ ಬೋಪಣ್ಣ ಗೆಲುವಿನೊಂದಿಗೆ ತಮ್ಮ 2 ದಶಕಗಳ ಡೇವಿಸ್‌ ಕಪ್‌ ಪಯಣಕ್ಕೆ ವಿದಾಯ ಹೇಳಿದರು. 2002ರಲ್ಲಿ ಡೇವಿಸ್‌ ಕಪ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ 33 ಮುಖಾಮುಖಿಗಳಲ್ಲಿ 50 ಪಂದ್ಯಗಳನ್ನಾಡಿದ್ದು, ಒಟ್ಟು 23 ಗೆಲುವು ಸಾಧಿಸಿದ್ದಾರೆ. ಡಬಲ್ಸ್‌ನಲ್ಲಿ ಅವರು 13 ಪಂದ್ಯಗಳಲ್ಲಿ ಗೆದ್ದಿದ್ದರೆ ಇನ್ನುಳಿದ 10 ಗೆಲುವು ಸಿಂಗಲ್ಸ್‌ನಲ್ಲಿ ಬಂದಿವೆ.

Davis Cup 2023: ಭಾರತದ ಕಮ್‌ಬ್ಯಾಕ್‌ಗೆ ನೆರವಾದ ಸುಮಿತ್ ನಗಾಲ್‌

ಭಾನುವಾರ ಬೋಪಣ್ಣಗೆ ವಿದಾಯ ಕೋರಲು ಅವರ ಕುಟುಂಬಸ್ಥರು, ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು. ಬೋಪಣ್ಣರ ಫೋಟೋ ಹಾಗೂ ತ್ರಿವರ್ಣ ಧ್ವಜ ಮುದ್ರಿಸಿದ ಜೆರ್ಸಿ ಧರಿಸಿದ್ದ ಅಭಿಮಾನಿಗಳು ವಿದಾಯದ ಪಂದ್ಯದುದ್ದಕ್ಕೂ ಬೋಪಣ್ಣರನ್ನು ಹುರಿದುಂಬಿಸಿದರು. ಪಂದ್ಯ ಮುಗಿದ ಬಳಿಕ ಜೆರ್ಸಿಯನ್ನು ಅಂಕಣದಲ್ಲಿ ಹಾಸಿ ಬೋಪಣ್ಣ ಡೇವಿಸ್‌ ಕಪ್‌ಗೆ ವಿಶೇಷವಾಗಿ ವಿದಾಯ ಕೋರಿದರು. ಬೋಪಣ್ಣ ಭಾರತದ ಧ್ವಜವನ್ನು ಮೈಮೇಲೆ ಹೊದ್ದು ಸಂಭ್ರಮಿಸಿದರೆ, ಸಹ ಆಟಗಾರರು ಅವರನ್ನು ಭುಜದ ಮೇಲೆ ಹೊತ್ತುಕೊಂಡು ಅಂಕಣದಲ್ಲಿ ಸುತ್ತಾಡಿದರು.

ರಾಜ್ಯ ಸಂಸ್ಥೆ ಸನ್ಮಾನ

ಲಖನೌಗೇ ತೆರಳಿ ಬೋಪಣ್ಣಗೆ ಹುರಿದುಂಬಿಸಿದ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ ಅಧಿಕಾರಿಗಳು, ರಾಜ್ಯದ ಹೆಮ್ಮೆಯ ಆಟಗಾರನಿಗೆ ಸನ್ಮಾನವನ್ನೂ ಮಾಡಿದರು.

ಪಂದ್ಯದ ಬಳಿಕವೂ ಹೃದಯ ಗೆದ್ದ ಸಿರಾಜ್, ಪ್ರಶಸ್ತಿ ಮೊತ್ತ ಲಂಕಾ ಗ್ರೌಂಡ್ ಸಿಬ್ಬಂದಿಗೆ ನೀಡಿದ ವೇಗಿ!

ಶೂಟಿಂಗ್ ವಿಶ್ವಕಪ್‌: ಚಿನ್ನ ಗೆದ್ದ ಭಾರತದ ಇಳವೆನಿಲ್‌

ರಿಯೋ ಡಿ ಜನೈರೊ(ಬ್ರೆಜಿಲ್‌): ಭಾರತದ ತಾರಾ ಶೂಟರ್‌ ಇಳವೆನಿಲ್‌ ವಲರಿವನ್‌ ರಿಯೋ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಇಳವೆನಿಲ್‌ 252.2 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ಫ್ರಾನ್ಸ್‌ನ ಓಸಿಯನ್‌ ಮುಲ್ಲರ್‌ 251.9 ಅಂಕಗಳೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರೆ, ಚೀನಾದ ಝಾಂಗ್‌ ಜಿಯಾಲ್ 229.0 ಅಂಕ ಪಡೆದು ಕಂಚಿಗೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಶುಕ್ರವಾರ ಸಂದೀಪ್‌ ಸಿಂಗ್‌ ಜೊತೆಗೂಡಿ ಇಳವೆನಿಲ್‌ 10 ಮೀ. ಏರ್ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ 5ನೇ ಸ್ಥಾನ ಪಡೆದಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'
2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!