Davis Cup 2023 ಬಿಸಿಲಿನ ಬೇಗೆ; ಡೇವಿಸ್ ಕಪ್ ಪಂದ್ಯದ ಸಮಯ ಬದಲಾವಣೆ

By Kannadaprabha NewsFirst Published Sep 15, 2023, 8:59 AM IST
Highlights

ಶನಿವಾರ ಮಧ್ಯಾಹ್ನ 12ಕ್ಕೆ ಆರಂಭವಾಗಬೇಕಿದ್ದ ಪಂದ್ಯ 2 ಗಂಟೆ ತಡವಾಗಿ ಶುರುವಾಗಲಿದೆ. ಭಾನುವಾರದ ಪಂದ್ಯದ ಸಮಯವನ್ನು ಪೂರ್ವಾಹ್ನ 11ರಿಂದ ಮಧ್ಯಾಹ್ನ 1ಕ್ಕೆ ಮುಂದೂಡಲಾಗಿದೆ. ರೋಹನ್‌ ಬೋಪಣ್ಣ ಸೇರಿದಂತೆ ಭಾರತದ ಆಟಗಾರರು ಸದ್ಯ ಬಿಸಿಲಿನ ದಗೆಯಿಂದಾಗಿ ಅಭ್ಯಾಸ ನಡೆಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಖನೌ(ಸೆ.15): ಶನಿವಾರ ಹಾಗೂ ಭಾನುವಾರ ನಗರದಲ್ಲಿ ಭಾರತ ಹಾಗೂ ಮೊರಾಕ್ಕೊ ನಡುವೆ ಡೇವಿಸ್‌ ಕಪ್‌ ವಿಶ್ವ ಗುಂಪು-2ರ ಪಂದ್ಯಗಳು ನಡೆಯಬೇಕಿದ್ದು, ಆಟಗಾರರು ಬಿಸಿಲಿನ ತಾಪವನ್ನು ಎದುರಿಸಲಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಪಂದ್ಯಗಳ ಸಮಯವನ್ನೇ ಬದಲಾವಣೆ ಮಾಡಲಾಗಿದೆ.

ಶನಿವಾರ ಮಧ್ಯಾಹ್ನ 12ಕ್ಕೆ ಆರಂಭವಾಗಬೇಕಿದ್ದ ಪಂದ್ಯ 2 ಗಂಟೆ ತಡವಾಗಿ ಶುರುವಾಗಲಿದೆ. ಭಾನುವಾರದ ಪಂದ್ಯದ ಸಮಯವನ್ನು ಪೂರ್ವಾಹ್ನ 11ರಿಂದ ಮಧ್ಯಾಹ್ನ 1ಕ್ಕೆ ಮುಂದೂಡಲಾಗಿದೆ. ರೋಹನ್‌ ಬೋಪಣ್ಣ ಸೇರಿದಂತೆ ಭಾರತದ ಆಟಗಾರರು ಸದ್ಯ ಬಿಸಿಲಿನ ದಗೆಯಿಂದಾಗಿ ಅಭ್ಯಾಸ ನಡೆಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಭ್ಯಾಸದ ವೇಳೆ ಪ್ರತಿ ಅರ್ಧ ಗಂಟೆಗೆ ಟಿ-ಶರ್ಟ್‌ ಬದಲಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬೋಪಣ್ಣ ತಿಳಿಸಿದ್ದಾರೆ.

ಖ್ಯಾತ ಟೆನಿಸ್‌ ಆಟಗಾರ್ತಿ ಹಾಲೆಪ್‌ 4 ವರ್ಷ ಬ್ಯಾನ್‌!

ಲಂಡನ್‌: 2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತೆ, ಮಾಜಿ ವಿಶ್ವ ನಂ.1 ಟೆನಿಸ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಅವರು ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲರಾಗಿದ್ದು, 4 ವರ್ಷ ಟೆನಿಸ್‌ನಿಂದ ನಿಷೇಧಕ್ಕೊಳಗಾಗಿದ್ದಾರೆ. ರೊಮೇನಿಯಾದ 31 ವರ್ಷದ ಹಾಲೆಪ್‌ 2022ರ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿ ವೇಳೆ ನಡೆಸಲಾದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಹೀಗಾಗಿ 2022ರ ಅಕ್ಟೋಬರ್‌ನಲ್ಲಿ ಅವರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಸದ್ಯ ನಿಷೇಧವನ್ನು 4 ವರ್ಷಕ್ಕೆ ಏರಿಸಲಾಗಿದ್ದು, ಇದರ ಅವಧಿ 2026ರ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಹಾಲೆಪ್‌ 2017ರಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಅವರು 2019ರ ವಿಂಬಲ್ಡನ್‌, 2020ರ ಫ್ರೆಂಚ್‌ ಓಪನ್‌ ಗೆದ್ದಿದ್ದಾರೆ.

ಧೋನಿ ಮೊದಲ ಗುರು, CSK ನಾಯಕ ಯಶಸ್ಸಿನ ಹಿಂದಿರುವ ಕಾಣದ ಕೈ ಇವರೇ ನೋಡಿ..!

ಹಾಂಕಾಂಗ್‌ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯ

ಕೊವ್ಲೂನ್‌(ಹಾಂಕಾಂಗ್‌): ಇಲ್ಲಿ ನಡೆಯುತ್ತಿರುವ ಹಾಂಕಾಂಗ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಗುರುವಾರ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಎರಡೂ ಜೋಡಿಗಳು ಸೋಲನುಭವಿಸಿದವು. ತ್ರೀಸಾ-ಗಾಯತ್ರಿ ಗೋಪಿಚಂದ್‌ ಪ್ರಿ ಕ್ವಾರ್ಟರ್‌ನಲ್ಲಿ ಇಂಡೋನೇಷ್ಯಾದ ರಹಾಯು-ಫಾದಿಯಾ ಸಿಲ್ವ ವಿರುದ್ಧ 8-21, 14-21 ಗೇಮ್‌ಗಳಲ್ಲಿ ಪರಾಭವಗೊಂಡರು. ಮತ್ತೊಂದು ಪ್ರಿ ಕ್ವಾರ್ಟರ್‌ನಲ್ಲಿ ತನಿಶಾ ಕ್ರಾಸ್ಟೋ-ಅಶ್ವಿನಿ ಪೊನ್ನಪ್ಪ ಜೋಡಿ ಜಪಾನ್‌ನ ಮಾಯು ಮಾಟ್ಸುಮೊಟೊ-ವಕಾನ ನಗಹರ ವಿರುದ್ಧ 18-21, 7-21ರಲ್ಲಿ ಸೋತು ಹೊರಬಿತ್ತು.

ಏಷ್ಯಾಡ್‌: ಈಜುಪಟುಗಳಿಗೆ ಬೀಳ್ಕೊಡುಗೆ

ಬೆಂಗಳೂರು: ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಈಜುಪಟುಗಳಿಗೆ ಗುರುವಾರ ಕರ್ನಾಟಕ ಈಜು ಸಂಸ್ಥೆ(ಕೆಎಸ್‌ಎ) ಹಾಗೂ ಭಾರತ ಈಜು ಫೆಡರೇಶನ್‌(ಎಸ್‌ಎಫ್‌ಐ) ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಬೆಂಗಳೂರಲ್ಲಿರುವ ಪಡುಕೋಣೆ ದ್ರಾವಿಡ್‌ ಕ್ರೀಡಾ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್‌ಎ ಅಧ್ಯಕ್ಷ ಗೋಪಾಲ್‌ ಹೊಸೂರು, ಎಸ್‌ಎಫ್‌ಐ ಕಾರ್ಯದರ್ಶಿ ಮೋನಲ್ ಚೋಕ್ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜ್ಯೋತಿಷಿಯ ಸಲಹೆ ಕೇಳಿ ಭಾರತ ಫುಟ್ಬಾಲ್‌ ತಂಡ ಆಯ್ಕೆ ಮಾಡುತ್ತಿದ್ದ ಕೋಚ್‌!

ಏಷ್ಯನ್‌ ಮಹಿಳಾ ಹಾಕಿ: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ ಮೊದಲ ಪಂದ್ಯ

ರಾಂಚಿ: ರಾಂಚಿಯಲ್ಲಿ ನಡೆಯಲಿರುವ ಮಹಿಳೆಯರ ಏಷ್ಯನ್‌ ಹಾಕಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅ.27ರಂದು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಥಾಯ್ಲೆಂಡ್ ವಿರುದ್ಧ ಸೆಣಸಾಡಲಿದೆ. ಗುರುವಾರ ಹಾಕಿ ಇಂಡಿಯಾ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿತು. ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ 2ನೇ ಪಂದ್ಯದಲ್ಲಿ ಅ.28ಕ್ಕೆ ಥಾಯ್ಲೆಂಡ್‌, 30ಕ್ಕೆ ಚೀನಾ, 31ಕ್ಕೆ ಜಪಾನ್‌ ಹಾಗೂ ಕೊನೆ ಪಂದ್ಯದಲ್ಲಿ ನ.2ರಂದು ಕೊರಿಯಾವನ್ನು ಎದುರಿಸಲಿದೆ. ಲೀಗ್‌ ಹಂತದಲ್ಲಿ ಅಗ್ರ 4 ಸ್ಥಾನ ಪಡೆವ ತಂಡಗಳು ಸೆಮಿಫೈನಲ್‌ಗೇರಲಿದ್ದು, ನ.5ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಭಾರತ ಈ ಮೊದಲು 2016ರಲ್ಲಿ ಚಾಂಪಿಯನ್‌ ಆಗಿದ್ದು, 2013, 2018ರಲ್ಲಿ ರನ್ನರ್‌-ಅಪ್‌ ಆಗಿತ್ತು.

click me!