ಡೇವಿಸ್ ಕಪ್: ಭಾರತ ತಂಡಕ್ಕೆ 0-2 ಹಿನ್ನಡೆ

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಾಮ್ ಕುಮಾರ್ ರಾಮನಾಥನ್, ಆ್ಯಂಡ್ರೆಸ್ ಸೆಪ್ಪಿ ವಿರುದ್ಧ 4-6, 2-6 ಸೆಟ್‌ಗಳಲ್ಲಿ ಸೋಲುಂಡರೆ, 2ನೇ ಸಿಂಗಲ್ಸ್‌ನಲ್ಲಿ ಭಾರತದ ನಂ.1 ಪ್ರಜ್ನೇಶ್ ಗುಣೇಶ್ವರನ್, ಚೊಚ್ಚಲ ಡೇವಿಸ್ ಕಪ್ ಪಂದ್ಯ ವನ್ನಾಡಿದ ಮಾಟ್ಟೆಯೋ ಬೆರೆಟ್ಟಿನಿ ವಿರುದ್ಧ 4-6, 3-6 ಸೆಟ್‌ಗಳಲ್ಲಿ ಪರಾಭವಗೊಂಡರು. 

ಕೋಲ್ಕತಾ(ಫೆ.02): ಡೇವಿಸ್ ಕಪ್ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ಶುಕ್ರವಾರ ಇಲ್ಲಿ ಆರಂಭಗೊಂಡ ಇಟಲಿ ವಿರುದ್ಧದ ಪಂದ್ಯದಲ್ಲಿ ಭಾರತ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿತು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಾಮ್ ಕುಮಾರ್ ರಾಮನಾಥನ್, ಆ್ಯಂಡ್ರೆಸ್ ಸೆಪ್ಪಿ ವಿರುದ್ಧ 4-6, 2-6 ಸೆಟ್‌ಗಳಲ್ಲಿ ಸೋಲುಂಡರೆ, 2ನೇ ಸಿಂಗಲ್ಸ್‌ನಲ್ಲಿ ಭಾರತದ ನಂ.1 ಪ್ರಜ್ನೇಶ್ ಗುಣೇಶ್ವರನ್, ಚೊಚ್ಚಲ ಡೇವಿಸ್ ಕಪ್ ಪಂದ್ಯ ವನ್ನಾಡಿದ ಮಾಟ್ಟೆಯೋ ಬೆರೆಟ್ಟಿನಿ ವಿರುದ್ಧ 4-6, 3-6 ಸೆಟ್‌ಗಳಲ್ಲಿ ಪರಾಭವಗೊಂಡರು. 

Latest Videos

ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಗೆಲ್ಲಲೇಬೇಕಿದೆ. ಬಳಿಕ 2 ರಿವರ್ಸ್ ಸಿಂಗಲ್ಸ್‌ನಲ್ಲೂ ಗೆದ್ದರೆ ಮಾತ್ರ ಭಾರತ ಡೇವಿಸ್ ಕಪ್ ಫೈನಲ್ಸ್‌ಗೆ ಪ್ರವೇಶ ಪಡೆಯಲಿದೆ. 

click me!