ಭಾರತ-ಪಾಕ್‌ ಟೆನಿಸ್‌: ನ.4ರಂದು ಭದ್ರತಾ ಪರಿಶೀಲನೆ

By Kannadaprabha News  |  First Published Sep 14, 2019, 3:35 PM IST

ಭಾರತ ತಂಡವು ಡೇವಿಸ್ ಕಪ್ ಟೆನಿಸ್ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಹೋಗಬೇಕೆ..? ಬೇಡವೇ..? ಎನ್ನುವ ವಿಚಾರವಾಗಿ ಮತ್ತೊಂದು ಸುತ್ತಿನ ಭದ್ರತಾ ಪರಿಶೀಲನೆಗೆ ದಿನಾಂಕ ನಿಗದಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ಸೆ.14]: ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆನಿಸ್‌ ಡೇವಿಸ್‌ ಕಪ್‌ ಮುಖಾಮುಖಿ ನವೆಂಬರ್‌ನಲ್ಲಿ ನಡೆಯಲಿದ್ದು, ಇಸ್ಲಮಾಬಾದ್‌ನಲ್ಲಿ ನ.4ರಂದು ಇನ್ನೊಂದು ಸುತ್ತಿ​ನ ಭದ್ರತಾ ಪರಿಶೀಲನೆ ನಡೆಯಲಿದೆ ಎಂದು ಅಖಿಲ ಭಾರತ ಟೆನಿಸ್‌ ಸಂಘ (ಎಐಟಿಎ) ಶುಕ್ರವಾರ ತಿಳಿಸಿದೆ.

ಭಾರತ-ಪಾಕ್‌ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

Tap to resize

Latest Videos

undefined

‘ಇಸ್ಲಮಾಬಾದ್‌ನಲ್ಲಿ ಪಂದ್ಯ ನಡೆಯಲಿದೆಯೇ ಅಥವಾ ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರ ಆಗುತ್ತದೆಯೇ ಎಂದು ನ.4ರಂದು ನಡೆಯುವ ಭದ್ರತಾ ಪರಿಶೀಲನೆ ಬಳಿಕ ತಿಳಿಯಲಿದೆ’ ಎಂದು ಎಐಟಿಎ ತಿಳಿಸಿದೆ. ಈ ಹಿಂದಿನ ವೇಳಾಪಟ್ಟಿಪ್ರಕಾರ ಸೆ.14-15ರಂದು ಇಸ್ಲಮಾಬಾದ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಟೆನಿಸ್‌ ತಂಡಗಳು ಮುಖಾಮುಖಿ ಆಗಬೇಕಿತ್ತು. ಆದರೆ ಉಭಯ ದೇಶ​ಗಳ ನಡುವೆ ರಾಜ​ಕೀಯ ಉದ್ವಿ​ಗ್ನತೆ ಕಾರಣ, ಪಂದ್ಯವನ್ನು ತಟಸ್ಥ ಸ್ಥಳ​ದಲ್ಲಿ ನಡೆ​ಸು​ವಂತೆ ಇಲ್ಲವೇ ಮುಂದೂ​ಡು​ವಂತೆ ಎಐ​ಟಿಐ, ವಿಶ್ವ ಟೆನಿಸ್‌ ಫೆಡ​ರೇ​ಷನ್‌ಗೆ ಮನವಿ ಮಾಡಿತ್ತು.

ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!

ಈ ಮೊದಲು ಕೇಂದ್ರ ಸರ್ಕಾರ ಭಾರತೀಯ ಟೆನಿಸ್ ಆಟಗಾರರು ಡೇವಿಸ್ ಕಪ್ ಟೂರ್ನಿಗೆ ಪಾಲ್ಗೊಳ್ಳುವ ಬಗ್ಗೆ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿತ್ತು. ಆದರೆ ಆಟಗಾರರು ಡೇವಿಸ್ ಕಪ್ ಟೂರ್ನಿಯನ್ನು ತಟಸ್ಥ ದೇಶದಲ್ಲಿ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. 
 

click me!