
(ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಂದೇ ದಿನ 7 ಚಿನ್ನ ಸೇರಿ 16 ಪದಕ ಬಾಚಿದ ಭಾರತೀಯರು) ಹ್ಯಾಂಗ್‌ಲೈನ್
ಗ್ಲಾಸ್ಗೋ (ಆ.2): 2026ರ ಕಾಮನ್‌ವೆಲ್ತ್ ಗೇಮ್ಸ್(2026 Commonwealth Games)ನಲ್ಲಿ ಭಾರತ ಪರಾಕ್ರಮ ಮೆರೆದಿದೆ. ಬಾಕ್ಸಿಂಗ್‌ನಲ್ಲಿ ವಿಶ್ವಕ್ಕೇ ಪಂಚ್ ನೀಡಿದ ಭಾರತೀಯರು ಶನಿವಾರ ಒಂದೇ ದಿನ ಬರೋಬ್ಬರಿ 7 ಚಿನ್ನ ಸೇರಿ 8 ಪದಕ ಗೆದ್ದಿದ್ದಾರೆ. ಪ್ಯಾರಾ ಶಾಟ್‌ಪುಟ್, ಜಾವೆಲಿನ್ ಎಸೆತ, ಟ್ರಿಪಲ್ ಜಂಪ್, ಜುಡೋ, ಡೆಕಥ್ಲಾನ್‌ನಲ್ಲೂ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಶನಿವಾರದ ಭಾರತದ ಪದಕ ಬುಟ್ಟಿಗೆ ಒಟ್ಟು 16 ಪದಕಗಳು ಸೇರ್ಪಡೆಗೊಂಡವು. ಜೊತೆಗೆ, ಪದಕ ಪಟ್ಟಿಯಲ್ಲಿ ದೇಶ ಈಗ 5ನೇ ಸ್ಥಾನಕ್ಕೆ ಜಿಗಿದಿದೆ.
ಈ ಕೂಟದಲ್ಲಿ ಒಟ್ಟು 14 ಬಾಕ್ಸಿಂಗ್ ವಿಭಾಗಗಳಿದ್ದವು. ಈ ಪೈಕಿ 10ರಲ್ಲಿ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಮಹಿಳಾ 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್ ಅವರು ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ವಿರುದ್ಧ 5-0 ಅಂತರದಲ್ಲಿ ಗೆದ್ದು ಬಾಕ್ಸಿಂಗ್‌ನಲ್ಲಿ ಮೊದಲ ಚಿನ್ನ ತಂದುಕೊಟ್ಟರು. ಬಳಿಕ 57 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಜಾಸ್ಮೀನ್ ಲಂಬೋರಿಯಾ ಅವರು ಐರ್ಲೆಂಡ್‌ನ ವಾಲ್ಶ್ ವಿರುದ್ಧ ಜಯಭೇರಿ ಬಾರಿಸಿದರು. 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸಾಕ್ಷಿ ಚೌಧರಿ ಇಂಗ್ಲೆಂಡ್‌ನ ರುಬಿ ವೈಟ್ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು. 4ನೇ ಚಿನ್ನವನ್ನು ತಂದುಕೊಟ್ಟಿದ್ದು ಪ್ರಿಯಾ ಘಂಘಾಸ್. ಅವರು 60 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕೆನಡಾದ ಮರಿಯಾ ಬಥೋಲ್ ಅಲ್ ಅಹ್ಮದೀ ವಿರುದ್ಧ ವಿರುದ್ಧ 4-1 ಅಂತರದಲ್ಲಿ ಗೆದ್ದರು. ಪುರುಷರ 60 ಕೆ.ಜಿ. ವಿಭಾಗದಲ್ಲಿ ಸಚಿನ್ ಸಿವಾಚ್ ಅವರು ನಮೀಬಿಯಾದ ಟ್ರಯಾಗೇನ್ ಮಾರ್ನಿಂಗ್ ಎನ್‌ಡೆವೆಲೊ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು.
CWG 2026 ಇಬ್ಬರಿಗೆ ಬೆಳ್ಳಿ:
ಪುರುಷರ 55 ಕೆ.ಜಿ. ವಿಭಾಗದಲ್ಲಿ ಜಾಡುಮನಿ ಸಿಂಗ್ ಚಿನ್ನದ ನಿರೀಕ್ಷೆಯಲ್ಲಿದ್ದರೂ ಅವರಿಗೆ ಅದು ಸಾಧ್ಯವಾಗಲಿಲ್ಲ. ಅವರು ಆಸ್ಟ್ರೇಲಿಯಾದ ಜೈ ಡಿಕ್ಷನ್ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು. ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್‌ಗೂ ಚಿನ್ನ ಕೈ ತಪ್ಪಿತು. ಅವರು ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎಮ್ಮಾ ಸ್ಯೂ ವಿರುದ್ಧ 1-4 ಅಂತರದಲ್ಲಿ ಸೋಲುಂಡರು.
ಕ್ರೀಡಾಕೂಟ ಆರಂಭದಿಂದಲೂ ಪದಕ ಪಟ್ಟಿಯಲ್ಲಿ 9, 10ನೇ ಸ್ಥಾನಗಳಲ್ಲಿ ಇರುತ್ತಿದ್ದ ಭಾರತ, ಶನಿವಾರ ಒಮ್ಮೆಲೇ 4ನೇ ಸ್ಥಾನಕ್ಕೆ ಜಿಗಿಯಿತು. ಒಟ್ಟು 11 ಪದಕ ಗೆದ್ದಿದ್ದರಿಂದ ಭಾರತ ಪಟ್ಟಿಯಲ್ಲಿ ಸ್ಕಾಟ್ಲೆಂಡ್, ನೈಜೀರಿಯಾ, ವೇಲ್ಸ್, ನ್ಯೂಜಿಲೆಂಡ್ ದೇಶಗಳನ್ನು ಹಿಂದಿಕ್ಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.