
ಪುಣೆ[ಮೇ.05]: ವಿಕೆಟ್ ಕೀಪರ್’ಬ್ಯಾಟ್ಸ್’ಮನ್ ಪಾರ್ಥೀವ್ ಪಟೇಲ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಉಳಿದ ಬ್ಯಾಟ್ಸ್’ಮನ್’ಗಳ ದಯಾನೀಯ ವೈಫಲ್ಯದಿಂದಾಗಿ ಚೆನ್ನೈ ಸೂಪರ್’ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು 127 ರನ್’ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್’ಸಿಬಿ ಆರಂಭದಲ್ಲೇ ಮುಗ್ಗರಿಸಿತು. ಎರಡನೇ ಓವರ್’ನಲ್ಲೇ ಮೆಕ್ಲಮ್[5] ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ 38 ರನ್’ಗಳ ಉಪಯುಕ್ತ ಜತೆಯಾಟವಾಡಿತು. ಡಿಕಾಕ್ ಬದಲು ಸ್ಥಾನ ಪಡೆದ ಪಾರ್ಥಿವ್ ಪಟೇಲ್[53] ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ[8] ಕ್ಲೀನ್ ಬೌಲ್ಡ್ ಮಾಡಿದ ಜಡೇಜಾ ಆರ್’ಸಿಬಿ ಕುಸಿತಕ್ಕೆ ನಾಂದಿ ಹಾಡಿದರು. ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್’ಸಿಬಿ ಒಂದು ಹಂತದಲ್ಲಿ 89 ರನ್’ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆಯಲ್ಲಿ ಟಿಮ್ ಸೌಥಿ ಬಾರಿಸಿದ ರನ್’ಗಳ ನೆರವಿನಿಂದ ಆರ್’ಸಿಬಿ 120ರ ಗಡಿ ದಾಟಿತು.
ಆರ್’ಸಿಬಿ ಪರ ಪಾರ್ಥಿವ್ ಪಟೇಲ್ 53 ಹಾಗೂ ಸೌಥಿ 36 ಹೊರತುಪಡಿಸಿದರೆ ಮತ್ತೆ ಯಾವ ಬ್ಯಾಟ್ಸ್’ಮನ್’ಗಳೂ ಎರಡಂಕಿ ಮೊತ್ತ ಮುಟ್ಟಲಿಲ್ಲ.
ಬಲ ತುಂಬಿದ ಪಟೇಲ್-ಸೌಥಿ: ಆರ್’ಸಿಬಿ ಪರ ಪಾರ್ಥಿವ್ ಪಟೇಲ್[53] ಹಾಗೂ ಟಿಮ್ ಸೌಥಿ[37] ಎರಡಂಕಿ ಮೊತ್ತ ತಲುಪದೇ ಹೋಗಿದ್ದರೆ ತಂಡದ ಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು. ಎಬಿಡಿ, ಕೊಹ್ಲಿ, ಮನ್ದೀಪ್, ಮೆಕ್ಲಮ್ ಮುಂತಾದ ಸ್ಟಾರ್ ಎರಡಂಕಿ ಮೊತ್ತ ಮುಟ್ಟಲು ಪರದಾಡಿದ್ದು ವಿಶೇಷ. ಸಿಎಸ್’ಕೆ ಪರ ಜಡೇಜಾ ಪ್ರಮುಖ 3 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 2 ಹಾಗೂ ಡೇವಿಡ್ ವಿಲ್ಲಿ ಮತ್ತು ಎನ್ಜಿಡಿ ತಲಾ ಒಂದೊಂದು ವಿಕೆಟ್ ಪಡೆದರು.
ಆರ್’ಸಿಬಿ: 127/9
ಪಾರ್ಥಿವ್ ಪಟೇಲ್: 53
ರವೀಂದ್ರ ಜಡೇಜಾ: 18/3
[* ವಿವರ ಅಪೂರ್ಣ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.