ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಶಾಕ್!

Published : Mar 30, 2019, 04:50 PM IST
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಶಾಕ್!

ಸಾರಾಂಶ

ಸೂಪರ್ ಸಂಡೆ ಹೋರಾಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಯಾರಿ ನಡೆಸುತ್ತಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಅಬ್ಬರಿಸಲು ರೆಡಿಯಾಗಿರುವ CSK ತಂಡಕ್ಕೆ ಆಘಾತ ಎದುರಾಗಿದೆ. ಪಂದ್ಯ ಆರಂಭಕ್ಕೂ  ಮುನ್ನ ಚೆನ್ನೈಗೆ  ಎದುರಾಗಿರೋ ಸಂಕಷ್ಟವೇನು? ಇಲ್ಲಿದೆ ವಿವರ.  

ಚೆನ್ನೈ(ಮಾ.30): ಐಪಿಎಲ್ ಟೂರ್ನಿಯಲ್ಲಿ ಸತತ 2 ಗೆಲುವು ಸಾಧಿಸಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಹ್ಯಾಟ್ರಿಕ್ ಗೆಲುವನ್ನು ಎದುರುನೋಡುತ್ತಿದೆ. ಮೊದಲ ಪಂದ್ಯದಲ್ಲಿ RCB ಹಾಗೂ 2ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಗೆದ್ದಿರುವ CSK ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಆದರೆ RR ಪಂದ್ಯಕ್ಕೂ ಮೊದಲು CSKಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: IPL 2019 ಬಿಜೆಪಿ ಸೇರಿಕೊಂಡ್ರಾ ಕ್ರಿಸ್ ಗೇಲ್? 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವಿದೇಶಿ ವೇಗಿ ಡೇವಿಡ್ ವಿಲೆ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಡೇವಿಡ್ ವಿಲೆ ತವರಿಗೆ ವಾಪಾಸ್ಸಾಗಿದ್ದಾರೆ. ಹೀಗಾಗಿ  ಇಂಗ್ಲೆಂಡ್ ವೇಗಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 

ಇದನ್ನೂ ಓದಿ: IPL 2019: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

2018ರಲ್ಲಿ ಚೆನ್ನೈ ಪರ ಆಡಿದ್ದ ಡೇವಿಡ್ ವಿಲೆ ಬಳಿಕ ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಆಡಿದ್ದರು. ಇದೀಗ 12ನೇ ಆವೃತ್ತಿಯಲ್ಲೂ ಅಬ್ಬರಿಸಲು ರೆಡಿಯಾಗಿದ್ದ ವೇಗೆ, ದಿಢೀರ್ ಹಿಂದೆ ಸರಿದಿದ್ದಾರೆ. ಕಳೆದ ವರ್ಷ ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಜಾಧವ್ ಬದಲು ಡೇವಿಡ್ ವಿಲೆ ಆಯ್ಕೆಯಾಗಿದ್ದರು. ಸೌತ್ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಬಳಿಕ ಇದೀಗ ಡೇವಿಡ್ ವಿಲೆ ಸೇವೆ CSKಗೆ ಲಭ್ಯವಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?
ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!