ಯುವಿಯ ಈ ಆಸೆಯನ್ನು ಈಡೇರಿಸುತ್ತಾ BCCI..?

By Web DeskFirst Published Jun 19, 2019, 10:23 AM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೆಲದಿನಗಳ ಹಿಂದಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ವಿದೇಶಿ ಕ್ರಿಕೆಟ್ ಲೀಗ್ ಆಡಲು ಬಿಸಿಸಿಐ ಮನವಿ ಕೇಳಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನವದೆಹಲಿ[ಜೂ.19]: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಿಂದ ನಿವೃತ್ತಿ ಪಡೆದಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್, ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು
ಅನುಮತಿ ನೀಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ಅಧಿಕೃತವಾಗಿಪತ್ರ ಬರೆದಿದ್ದಾರೆ. 

#BIGBREAKING ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯುವಿ ಗುಡ್‌ಬೈ...!

‘ಯುವಿ ಕ್ರಿಕೆಟ್ ಆನಂದಿಸುವ ಸಲುವಾಗಿ ವಿದೇಶಿ ಲೀಗ್ ಗಳಲ್ಲಿ ಆಡಲು ಅನುಮತಿ ಕೋರಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಅವರೀಗ ನಿವೃತ್ತಿ ಪಡೆದಿರುವ ಕಾರಣ, ಅನುಮತಿ ಸಿಗಲಿದೆ’ ಎಂದು ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಯುವರಾಜ್‌ ವೃತ್ತಿಜೀವನದ 5 ಸಾಧನೆಗಳು!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ವೀರೇಂದ್ರ ಸೆಹ್ವಾಗ್ ಹಾಗೂ ವೇಗದ ಬೌಲರ್ ಜಹೀರ್ ಖಾನ್, ಯುಎಇನಲ್ಲಿ ನಡೆದ ಟಿ10 ಲೀಗ್‌ನಲ್ಲಿ ಆಡಿದ್ದರು.

ಯುವಿ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು...!

click me!