ವಿಚಿತ್ರವಾಗಿ ಔಟ್ ಆದ ಮಲಿಕ್: ದುರಂತ ಅಂದ್ರೆ ಇದೇನಾ..?

By Web DeskFirst Published Nov 10, 2018, 4:25 PM IST
Highlights

ಪಂದ್ಯದ 33ನೇ ಓವರ್ ಬೌಲಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್’ನ ವೇಗಿ ಲ್ಯೂಕ್ ಫರ್ಗ್ಯುಸನ್ ಪಾಕ್ ಕ್ರಿಕೆಟಗ ಶೋಯೆಬ್ ಮಲಿಕ್ ಅವರನ್ನು ಬಲಿ ಪಡೆದಿದ್ದು ಚರ್ಚೆಗೆ ಗ್ರಾಸವಾಗಿದೆ. 

ಅಬುದಾಬಿ[ನ.10]: ಕ್ರಿಕೆಟ್’ನಲ್ಲಿ ಹಲವಾರು ಬಾರಿ ಸಾಕಷ್ಟು ವಿಚಿತ್ರ ಹಾಗೆಯೇ ಅಪರೂಪದ ಸನ್ನಿವೇಷಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಅಂತಹದ್ದೇ ಒಂದು ವಿಚಿತ್ರ ಸನ್ನಿವೇಷಕ್ಕೆ ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯ ಸಾಕ್ಷಿಯಾಗಿದೆ.
ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಸಾನಿಯಾ ಮಿರ್ಜಾ ಮಗು ಫೋಟೋ ವೈರಲ್!

ಅಷ್ಟಕ್ಕೂ ಆಗಿದ್ದೇನು..?

ಪಂದ್ಯದ 33ನೇ ಓವರ್ ಬೌಲಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್’ನ ವೇಗಿ ಲ್ಯೂಕ್ ಫರ್ಗ್ಯುಸನ್ ಪಾಕ್ ಕ್ರಿಕೆಟಗ ಶೋಯೆಬ್ ಮಲಿಕ್ ಅವರನ್ನು ಬಲಿ ಪಡೆದಿದ್ದು ಚರ್ಚೆಗೆ ಗ್ರಾಸವಾಗಿದೆ. 33ನೇ ಓವರ್’ನ 4ನೇ ಎಸೆತದಲ್ಲಿ ಮಲಿಕ್ ಚೆಂಡನ್ನು ಫುಲ್ ಶಾಟ್ ಆಗಿ ಬಾರಿಸಿದಾಗ ಚೆಂಡು ಸಿಲ್ಲಿ ಮಿಡ್’ಆನ್’ನಲ್ಲಿ ನಿಂತಿದ್ದ ಹೆನ್ರಿ ನಿಕೋಲಸ್ ಭುಜಕ್ಕೆ ತಾಗಿ ಮೇಲೆದ್ದ ಚೆಂಡನ್ನು ಇಶ್ ಸೋಧಿ ಸುಲಭ ಕ್ಯಾಚ್ ಪಡೆಯುವಲ್ಲಿ ಸಫಲರಾದರು.

ಸಾನಿಯಾ ಮಗು ಟೆನಿಸ್ ಪಟು ಅಥ್ವಾ ಕ್ರಿಕೆಟರ್- ಶೋಯೆಬ್ ಉತ್ತರವೇನು?

ಹೀಗಿತ್ತು ಆ ಕ್ಷಣ...

 
 
 
 
 
 
 
 
 
 
 
 
 

Have you ever seen a wicket like this? #PAKvNZ #UAETour #CricketNation #cricket 🎥= @skysportnz

A post shared by BLACKCAPS (@blackcapsnz) on Nov 9, 2018 at 9:21pm PST

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್’ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಭಾನುವಾರ ಅಂತಿಮ ಪಂದ್ಯ ನಡೆಯಲಿದೆ.
 

click me!