ದೆಹಲಿ ಚುನಾವಣಾ ಅಖಾಡಕ್ಕೆ ಗೌತಮ್ ಗಂಭೀರ್?

Published : Aug 19, 2018, 03:10 PM ISTUpdated : Sep 09, 2018, 09:08 PM IST
ದೆಹಲಿ ಚುನಾವಣಾ ಅಖಾಡಕ್ಕೆ ಗೌತಮ್ ಗಂಭೀರ್?

ಸಾರಾಂಶ

ಗಂಭೀರ್ ಇದೀಗ ಹೊಸ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಕಳದೆ ಕೆಲ ವರ್ಷಗಳಿಂದ ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ಗೆ ಸೀಮಿತವಾಗಿರುವ ಗಂಭೀರ್ ಇದೀಗ ರಾಜಕೀಯಕ್ಕೆ ಎಂಟ್ರಿಕೊಡ್ತಾರ? ಇಲ್ಲಿದೆ ವಿವರ. 

ನವದೆಹಲಿ(ಆ.19): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಗಂಭೀರ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಮೂಲಗಳ ಪ್ರಕಾರ ಮುಂಬರುವ ದೆಹಲಿ ಚುನಾವಣೆಗೆ ಗೌತಮ್ ಗಂಭೀರ್ ಕಣಕ್ಕಿಳಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಇದಕ್ಕಾಗಿ ಗಂಭೀರ್ ಮನವೊಲಿಸಲು ದೆಹಲಿ ಬಿಜೆಪಿ ಘಟಕ್ಕೆ ಜವಾಬ್ದಾರಿ  ನೀಡಲಾಗಿದೆ. ಈ ಮೂಲಕ ದೆಹಲಿ ಯುವ ಜನತೆಯನ್ನ ಬಿಜೆಪಿ ಹಿಡಿದಿಟ್ಟುಕೊಳ್ಳಲು ಸಜ್ಜಾಗಿದೆ.

2015ರಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಸೋಲು ಅನುಭವಿಸಿತ್ತು. ಹೀಗಾಗಿ ಬಿಜೆಪಿ ಈ ಬಾರಿ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ರೆಡಿಮಾಡಿದೆ. ಆದರೆ ಬಿಜೆಪಿ ಆಹ್ವಾನ ಹಾಗೂ ರಾಜಕೀಯ ಎಂಟ್ರಿ ಕುರಿತು ಗೌತಮ್ ಗಂಭೀರ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ ಬಳಿಕ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಮುನ್ನಡೆಸಿದ ಗಂಭೀರ್, ಅರ್ಧದಲ್ಲೇ ನಾಯಕತ್ವ ತ್ಯಜಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ
ಐಪಿಎಲ್ ಹರಾಜು: ವಿದೇಶಿ ಆಟಗಾರರ ಸಂಬಳಕ್ಕೆ ಬ್ರೇಕ್; ಫಾರೀನ್ ಆಟಗಾರರಿಗೆ ಗರಿಷ್ಠ ಸಿಗೋ ಸ್ಯಾಲರಿ ಇಷ್ಟೇ!