ಭಾರತ-ಇಂಗ್ಲೆಂಡ್ ಟೆಸ್ಟ್: ದ್ವಿತೀಯ ದಿನದಾಟಕ್ಕೆ ಮಳೆ ಅಡ್ಡಿ

By Web DeskFirst Published Aug 19, 2018, 2:39 PM IST
Highlights

ಟ್ರೆಂಟ್‌ಬ್ರಿಡ್ಜ್ ಪಂದ್ಯದ  ಮೊದಲ ದಿನದಾಟದಲ್ಲಿ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾಗೆ ಇದೀಗ ಮತ್ತೆ ಮಳೆರಾಯ ಕಾಟ ನೀಡಿದ್ದಾನೆ. 2ನೇ ದಿನದಾಟ ಆರಂಭಕ್ಕೂ ಮುನ್ನ ತುಂತುರ ಮಳೆಗೆ ಪಂದ್ಯ ತಡವಾಗಿ ಆರಂಭವಾಗಲಿದೆ

ನಾಟಿಂಗ್‌ಹ್ಯಾಮ್(ಆ.19): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ 307 ರನ್ ಸಿಡಿಸಿದ ಟೀಂ ಇಂಡಿಯಾ ದ್ವಿತೀಯ ದಿನದಾಟಕ್ಕೆ ಸಜ್ಜಾಗಿದೆ. ಆದರೆ ಎರಡನೇ ದಿನದಾಟ ವಿಳಂಭವಾಗಲಿದೆ. ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯಕ್ಕೆ ಇದೀಗ ಮಳೆ ಅಡ್ಡಿಯಾಗಿದೆ.

ದ್ವಿತೀಯ ದಿನದಾಟ ತಡವಾಗಿ ಆರಂಭವಾಗಲಿದೆ. ಸದ್ಯ ತುಂತುರ ಮಳೆಯಿಂದಾಗಿ ಪಿಚ್ ಕವರ್ ಮಾಡಲಾಗಿದೆ. ಮಳ ಬಳಿಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಮುಂದುವರಿಸಲಿದೆ. ಆದರೆ ಮಳೆಯಿಂದಾಗಿ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡೋ ಸಾಧ್ಯತೆ ಇದೆ.

ಮೊದಲ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿದರೆ, ಅಜಿಂಕ್ಯ ರಹಾನೆ 81 ರನ್ ಕಾಣಿಕೆ ನೀಡಿದ್ದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 307 ರನ್ ದಾಖಲಿಸಿತ್ತು. ಯುವ ಕ್ರಿಕಟಿಗ ರಿಷಭ್ ಪಂತ್ ಅಜೇಯ 22 ರನ್  ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಇದೀಗ 3ನೇ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ಸೈನ್ಯ ಕಠಿಣ ಹೋರಾಟ ನೀಡಲಿದೆ.

click me!