18 ವರ್ಷದ ಡಿ ಗುಕೇಶ್, ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ 2024ರ ವಿಶ್ವ ಚೆಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಗೆಲುವಿನ ಹಿಂದೆ ವಿಶ್ವ ವಿಖ್ಯಾತ ಮೆಂಟಲ್ ಕೋಚ್ ಪ್ಯಾಡಿ ಅಪ್ಟನ್‌ರ ಕಾಣದ ಕೈ ಇದೆ.
ಬೆಂಗಳೂರು: ದೊಮ್ಮರಾಜು ಗುಕೇಶ್ ಇದೀಗ ನೂತನ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 18 ವರ್ಷದ ತಮಿಳುನಾಡು ಮೂಲದ ಡಿ ಗುಕೇಶ್, ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ನಿರ್ಣಾಯಕ ಸುತ್ತಿನಲ್ಲಿ ರೋಚಕವಾಗಿ ಮಣಿಸಿ 2024ರ ವಿಶ್ವ ಚೆಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
14 ಹಾಗೂ ಕೊನೆಯ ಸುತ್ತಿಗೂ ಮುನ್ನ ಉಭಯ ಆಟಗಾರರು ತಲಾ 6.5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಕೊನೆಯ ಸುತ್ತಿನಲ್ಲಿ 4 ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ 58 ನಡೆಗಳ ಬಳಿಕ ಕೊನೆಯಲ್ಲಿ ಪಂದ್ಯವನ್ನು ಜಯಿಸುವಲ್ಲಿ ಡಿ. ಗುಕೇಶ್ ಯಶಸ್ವಿಯಾದರು. ಇದರೊಂದಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 18ನೇ ಆಟಗಾರ ಎನ್ನುವ ಹಿರಿಮೆಗೆ ಗುಕೇಶ್ ಪಾತ್ರರಾಗಿದ್ದಾರೆ.
7ನೇ ವಯಸ್ಸಿನಲ್ಲಿ ಚೆಸ್ ಆರಂಭಿಸಿ 18ರಲ್ಲಿ ವಿಶ್ವ ಚಾಂಪಿಯನ್ ಕಿರೀಟ ತೊಟ್ಟ ಗುಕೇಶ್ ಯಾರು?
ಗುಕೇಶ್ ಯಶಸ್ಸಿನ ಹಿಂದಿದೆ ಪ್ಯಾಡಿ ಅಪ್ಟನ್ ಕಾಣದ ಕೈ:
undefined
ಹೌದು, ವಿಶ್ವ ವಿಖ್ಯಾತ ಮೆಂಟಲ್ ಕೋಚ್ ಪ್ಯಾಡಿ ಅಪ್ಟನ್‌ರ ಸಹಾಯವೂ ಗುಕೇಶ್‌ಗೆ ಸಿಕ್ಕಿತ್ತು. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದಾಗ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಾಗಲೂ ಪ್ಯಾಡಿ ಅಪ್ಟನ್ ಭಾರತ ತಂಡಗಳಿಗೆ ಮಾರ್ಗದರ್ಶನ ನೀಡಿದ್ದರು.
ಈ ಪ್ರತಿಷ್ಠಿತ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಡಿ ಗುಕೇಶ್ ಅವರನ್ನು ತಾವು ಹೇಗೆ ಮಾನಸಿಕವಾಗಿ ಸಿದ್ದಪಡಿಸಿದ್ದೇನೆ ಎನ್ನುವುದನ್ನು ಪ್ಯಾಡಿ ಅಪ್ಟನ್ ವಿವರಿಸಿದ್ದರು. ಈ ಕುರಿತಂತೆ ಒಂದು ವಿಡಿಯೋದಲ್ಲಿ ಸ್ವತಃ ಡಿ ಗುಕೇಶ್ ಕೂಡಾ ತಾವು ಈ ಚೆಸ್ ಚಾಂಪಿಯನ್‌ಶಿಪ್‌ಗೆ ಹೇಗೆ ತಯಾರಾಗಿದ್ದೇನೆ ಎಂದು ವಿವರಿಸಿದ್ದರು. ಈ ವಿಡಿಯೋದಲ್ಲೇ ಪ್ಯಾಡಿ ಅಪ್ಟನ್ ಅವರು ಹೇಗೆ ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡಿದರು ಎನ್ನುವುದನ್ನು ವಿವರಿಸಿದ್ದರು.
ಅವರು ಡಿಸೆಂಬರ್ 03ನೇ ತಾರೀಕಿನಂದು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಗುಕೇಶ್, ಕಳೆದ ಕೆಲವು ತಿಂಗಳುಗಳಿಂದ ನಾನು ಪ್ಯಾಡಿ ಅಪ್ಟನ್ ಅವರ ಜತೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಜತೆ ಕೆಲಸ ಮಾಡುತ್ತಿರುವುದನ್ನು ನಾನು ಸಾಕಷ್ಟು ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
ಯುವ ಕ್ರಿಕೆಟಿಗರಿಗೆ ಮಣೆ: ಈ ಸ್ಟಾರ್ ಆಟಗಾರನಿಗೆ ಕರ್ನಾಟಕ ತಂಡದ ಬಾಗಿಲು ಬಂದ್!
ವಿಶ್ವ ಕೂಟಕ್ಕಾಗಿ ಅಭ್ಯಾಸಕ್ಕೆ ಗುಕೇಶ್‌ಗೆ ದಿಗ್ಗಜರ ನೆರವು!
ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲು ಗುಕೇಶ್‌ಗೆ ವಿಶ್ವ ಚೆಸ್‌ನಲ್ಲಿ ದಿಗ್ಗಜ ಆಟಗಾರರು ಎಂದೇ ಕರೆಸಿಕೊಳ್ಳುವ ಪೋಲೆಂಡ್‌ನ ಯಾನ್ ಕ್ರಿಸ್ಟಾಫ್ ದುದಾ, ರಾಡೆಕ್ ವೊಟಾಸ್ಜೆಕ್, ಗ್ರೆಗರ್ ಗಜೆಸ್ಕಿ, ಭಾರತದ ಪೆಂಟಾಲ ಹರಿಕೃಷ್ಣ, ಜರ್ಮನಿಯ ವಿನ್ಸೆಂಟ್ ಕೇಮರ್ ಜೊತೆಯಾಗಿದ್ದರು. ಅಲ್ಲದೇ ವಿಶ್ವನಾಥನ್ ಆನಂದ್ ಅಧಿಕೃತವಾಗಿ ಗುಕೇಶ್‌ರ ಅಭ್ಯಾಸ ಸಹಪಾಠಿ ಆಗದಿದ್ದರೂ, ಸಂಪೂರ್ಣ ಮಾರ್ಗದರ್ಶನ ನೀಡಿದ್ದರು.