ಪರ್ತ್ ಟೆಸ್ಟ್: ವೇಗಿಗಳ ಅಬ್ಬರಕ್ಕೆ ಆಸಿಸ್ ಆಲೌಟ್

By Web DeskFirst Published Dec 15, 2018, 9:45 AM IST
Highlights

ಮೊದಲ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 277 ರನ್ ಬಾರಿಸಿದ್ದ ಆಸಿಸ್, ಎರಡನೇ ದಿನ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. 7ನೇ ವಿಕೆಟ್’ಗೆ ಪೈನ್-ಕಮ್ಮಿನ್ಸ್ ಜೋಡಿ 59 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.

ಪರ್ತ್[ಡಿ.15]: ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ 326 ರನ್’ಗಳಿಗೆ ಆಲೌಟ್ ಆಗಿದೆ. ಇಂದು ಇಶಾಂತ್ ಶರ್ಮಾ ಸತತ 2 ಎಸೆತಗಳಲ್ಲಿ 2 ವಿಕೆಟ್ ಪಡೆದರೆ, ಬುಮ್ರಾ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಮೊದಲ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 277 ರನ್ ಬಾರಿಸಿದ್ದ ಆಸಿಸ್, ಎರಡನೇ ದಿನ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. 7ನೇ ವಿಕೆಟ್’ಗೆ ಪೈನ್-ಕಮ್ಮಿನ್ಸ್ ಜೋಡಿ 59 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ಎರಡನೇ ದಿನದಾಟದ 15ನೇ ಓವರ್’ನ ಕೊನೆಯ ಎಸೆತದಲ್ಲಿ ಕಮ್ಮಿನ್ಸ್ ಬಲಿ ಪಡೆದ ಉಮೇಶ್ ಯಾದವ್ ಮೊದಲ ಯಶಸ್ಸು ತಂದಿತ್ತರು. ಮರು ಓವರ್’ನಲ್ಲೇ ಬುಮ್ರಾ, ಆಸಿಸ್ ನಾಯಕ ಪೈನ್ ಅವರನ್ನು ಎಲ್’ಬಿ ಬಲೆಗೆ ಕೆಡುವುವಲ್ಲಿ ಯಶಸ್ವಿಯಾದರು. 
ಕೊನೆಯ ಎರಡು ವಿಕೆಟ್’ಗಳನ್ನು ಕಬಳಿಸುವಲ್ಲಿ ಇಶಾಂತ್ ಶರ್ಮಾ ಯಶಸ್ವಿಯಾದರು. ಕೇವಲ 16 ರನ್’ಗಳ ಅಂತರದಲ್ಲಿ ಆಸಿಸ್’ನ 4 ವಿಕೆಟ್’ಗಳು ಉರುಳಿದವು. ಭಾರತ ಪರ ಇಶಾಂತ್ ಶರ್ಮಾ 4, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಹನುಮ ವಿಹಾರಿ ತಲಾ 2 ವಿಕೆಟ್ ಕಬಳಿಸಿದರು. 

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 326/10

ಮಾರ್ಕಸ್ ಹ್ಯಾರಿಸ್: 70

ಟ್ರಾವಿಸ್ ಹೆಡ್: 58

ಇಶಾಂತ್ ಶರ್ಮಾ: 41/4

[* ವಿವರ ಅಫೂರ್ಣ]

click me!