
ಸೂರತ್(ಡಿ.15): ಐವರು ಬೌಲರ್‌ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಕರ್ನಾಟಕ, ಇಲ್ಲಿ ಶುಕ್ರವಾರದಿಂದ ಆರಂಭವಾಗಿರುವ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದೆ.
ರಾಜ್ಯದ ಐವರು ಬೌಲರ್‌ಗಳು ತಲಾ 2 ವಿಕೆಟ್ ಪಡೆದು, ಎದುರಾಳಿ ಗುಜರಾತ್ ತಂಡವನ್ನು ಕಟ್ಟಿಹಾಕಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್, ನಾಯಕ ಪ್ರಿಯಾಂಕ್ ಪಂಚಾಲ್ (74) ರನ್‌ಗಳ ಹೊರತಾಗಿಯೂ ಮೊದಲ ಇನಿಂಗ್ಸ್‌ನಲ್ಲಿ 216 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 45 ರನ್‌ಗಳಿಸಿದೆ. ಇನ್ನೂ 171 ರನ್‌ಗಳ ಹಿನ್ನಡೆಯಲ್ಲಿದೆ. ಭರವಸೆ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ (7) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
6 ರನ್ ಅಂತರದಲ್ಲಿ 2 ವಿಕೆಟ್: ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್‌ವಾಲ್ ಮತ್ತು ಡಿ. ನಿಶ್ಚಲ್ ದೊಡ್ಡ ಮೊತ್ತ ಸೇರಿಸುವ ಉತ್ಸಾಹದಲ್ಲಿದ್ದರು. ವೇಗದ ಬ್ಯಾಟಿಂಗ್‌ಗೆ ಮೊರೆ ಹೋದ ಮಯಾಂಕ್ 36 ಎಸೆತಗಳಲ್ಲಿ 4 ಬೌಂಡರಿ ಸಹಿತ 25ರನ್ ಗಳಿಸಿ ಔಟಾದರು. ನಿಶ್ಚಲ್ (12) ಚಾವ್ಲಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಎರಡು ವಿಕೆಟ್‌ಗಳು ಕೇವಲ 6 ರನ್‌ಗಳ ಅಂತರದಲ್ಲಿ ಬಿದ್ದವು.
ಪಂಚಾಲ್ ಅರ್ಧಶತಕದ ಆಸರೆ: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕತನ್ (13)ರನ್ನು ಗೌತಮ್ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ನಾಯಕ ಪ್ರಿಯಾಂಕ್ ಪಂಚಾಲ್(74), ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಅವರನ್ನು ಶ್ರೇಯಸ್ ಗೋಪಾಲ್ ಬೌಲ್ಡ್ ಮಾಡಿದರು. ಭಾರ್ಗವ್ (4), ರುಜುಲ್ (12), ಜುನೇಜಾ (15), ಅಕ್ಷರ್ ಪಟೇಲ್ (3), ಧೃವ್ ರಾವಲ್(13), ರೂಶ್ ಕಲಾರಿಯಾ(4) ವೈಫಲ್ಯ ಅನುಭವಿಸಿದರು. ಆದರೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳಾದ ಪಿಯುಶ್ ಚಾವ್ಲಾ (34) ಮತ್ತು ಮೆಹುಲ್ ಪಟೇಲ್ ಅಜೇಯ 31 ರನ್‌ಗಳಿಸಿದ್ದರಿಂದ ಗುಜರಾತ್ 200ರ ಗಡಿ ದಾಟಿತು. ಚಾವ್ಲಾರನ್ನು ವಿನಯ್ ಔಟ್ ಮಾಡಿದರು. ಅಂತಿಮವಾಗಿ ಗುಜರಾತ್ 216 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ, ಕೆ. ಗೌತಮ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಗುಜರಾತ್ 216/10,
ಕರ್ನಾಟಕ 45/2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.