ಪರ್ತ್ ಟೆಸ್ಟ್: ಆಸಿಸ್’ಗೆ ಮತ್ತೆರಡು ಶಾಕ್

By Web DeskFirst Published Dec 14, 2018, 12:43 PM IST
Highlights

ಮೊದಲ ವಿಕೆಟ್’ಗೆ 112 ರನ್’ಗಳ ಜತೆಯಾಟವಾಡಿದ್ದ ಆಸಿಸ್’ಗೆ ಬುಮ್ರಾ ಮೊದಲ ಆಘಾತ ನೀಡಿದರು. 50 ರನ್ ಬಾರಿಸಿದ್ದ ಫಿಂಚ್ ಅವರನ್ನು ಎಲ್’ಬಿ ಬಲೆಗೆ ಕೆಡುವಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು.

ಪರ್ತ್[ಡಿ.14]: ಮೊದಲ ವಿಕೆಟ್’ಗೆ ಶತಕದ ಜತೆಯಾಟವಾಡಿ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಾಗೆ ತಿರುಗೇಟು ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಕೇವಲ 22 ರನ್’ಗಳ ಅಂತರದಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಭಾರತ ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡಿದೆ.

ಮೊದಲ ವಿಕೆಟ್’ಗೆ 112 ರನ್’ಗಳ ಜತೆಯಾಟವಾಡಿದ್ದ ಆಸಿಸ್’ಗೆ ಬುಮ್ರಾ ಮೊದಲ ಆಘಾತ ನೀಡಿದರು. 50 ರನ್ ಬಾರಿಸಿದ್ದ ಫಿಂಚ್ ಅವರನ್ನು ಎಲ್’ಬಿ ಬಲೆಗೆ ಕೆಡುವಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಇದಾದ ನಂತರ ಉಸ್ಮಾನ್ ಖ್ವಾಜ್ ಅವರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ವೇಗಿ ಉಮೇಶ್ ಯಾದವ್ ಯಶಸ್ವಿಯಾದರು. ಈ ಆಘಾತದಿಂದ ಹೊರಬರುವಷ್ಟರಲ್ಲೇ ಹನುಮ ವಿಹಾರಿ ಉತ್ತಮವಾಗಿ ಆಡುತ್ತಿದ್ದ ಮಾರ್ಕಸ್ ಹ್ಯಾರಿಸ್[70] ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಬಲ ತುಂಬಿದರು.

ಹ್ಯಾರಿಸ್ 141 ಎಸೆತಗಳಲ್ಲಿ 10 ಬೌಂಡರಿ ಸಹಿತ 70 ರನ್ ಬಾರಿಸಿ ರಹಾನೆಗೆ ಕ್ಯಾಚಿತ್ತು ಹೊರ ನಡೆದರು. ಇದೀಗ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿದ್ದು, ಶಾನ್ ಮಾರ್ಷ್ 8 ಹಾಗೂ ಪೀಟರ್ ಹ್ಯಾಂಡ್ಸ್’ಕಂಬ್ 4 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 

click me!