
ಮುಂಬೈ[ಅ.29]: 2019ರ ಐಪಿಎಲ್‌ನಲ್ಲಿ ಕೆಲ ಹೊಸ ಮುಖಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನ್ದೀಪ್ ಸಿಂಗ್‌ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಮಾರಾಟ ಮಾಡಿರುವ ಆರ್’ಸಿಬಿ, ಆ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್‌ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಎಂದು ರಾಷ್ಟ್ರೀಯ
ಮಾಧ್ಯಮಗಳು ವರದಿ ಮಾಡಿವೆ.
ಇದನ್ನು ಓದಿ: ಮುಂಬೈ ಇಂಡಿಯನ್ಸ್ ಪಾಲಾದ ಆರ್’ಸಿಬಿ ಸ್ಟಾರ್ ಆಟಗಾರ..!
2016ರಲ್ಲಿ ಕಿಂಗ್ಸ್ ಇಲೆವೆನ್ ಸೇರಿದ್ದ ಸ್ಟೋಯ್ನಿಸ್, ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿರುವ ಅವರು, 262 ರನ್ ಕಲೆಹಾಕಿದ್ದು, 19
ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಸ್ಟೋಯ್ನಿಸ್’ರನ್ನು ಕಳೆದ ಆವೃತ್ತಿಯಲ್ಲಿ ₹6.20 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ತಂಡ ಉಳಿಸಿಕೊಂಡಿತ್ತು.
ಮತ್ತೊಂದೆಡೆ ಮನ್ದೀಪ್ ಸಹ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ₹1.40 ಕೋಟಿಗೆ ಆರ್’ಸಿಬಿ ಸೇರಿಕೊಂಡಿದ್ದ ಮನ್ದೀಪ್ ಆಡಿದ 14 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. ಇನ್ನು ಆರ್’ಸಿಬಿ ಒಟ್ಟು 40 ಪಂದ್ಯಗಳನ್ನಾಡಿರುವ ಮನ್ದೀಪ್ 22ರ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಈ ಹಿಂದೆಯೂ ಅವರು ಕಿಂಗ್ಸ್ ಇಲೆವೆನ್ ಪರ ಆಡಿದ್ದರು.
ಈ ಮೊದಲು ಆರ್’ಸಿಬಿಯ ಸ್ಟಾರ್ ಕ್ರಿಕೆಟಿಗ ಕ್ವಿಂಟನ್ ಡಿ’ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ಕಡೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.