ಕೊಹ್ಲಿ ಶತಕದ ನಾಗಾಲೋಟಕ್ಕೆ ಬಿತ್ತು ಬ್ರೇಕ್..!

By Web DeskFirst Published Oct 29, 2018, 3:17 PM IST
Highlights

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದ ಕೊಹ್ಲಿ, ಇಂದು ಶತಕ ಸಿಡಿಸಿದ್ದರೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ ಕೀಮರ್ ರೋಚ್ ಬೌಲಿಂಗ್’ನಲ್ಲಿ ಶೈ ಹೋಪ್’ಗೆ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ.

ಮುಂಬೈ[ಅ.29]: ಹ್ಯಾಟ್ರಿಕ್ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಕೊಹ್ಲಿ ಇನ್ನೊಂದು ಸೆಂಚುರಿ ಬಾರಿಸಬಹುದು ಎಂದು ನಿರೀಕ್ಷೆಯಲ್ಲಿದ್ದ ವಿರಾಟ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ.

ಇದನ್ನು ಓದಿ: ಹ್ಯಾಟ್ರಿಕ್ ಶತಕ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದ ಕೊಹ್ಲಿ, ಇಂದು ಶತಕ ಸಿಡಿಸಿದ್ದರೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ ಕೀಮರ್ ರೋಚ್ ಬೌಲಿಂಗ್’ನಲ್ಲಿ ಶೈ ಹೋಪ್’ಗೆ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ.

ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವ ಮುನ್ನ 17 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಬಾರಿಸಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತ 20 ಓವರ್ ಮುಕ್ತಾಯದ ವೇಳೆಗೆ 2 ವಿಕೆಟ್ ನಷ್ಟಕ್ಕೆ 110 ರನ್ ಬಾರಿಸಿದ್ದು, ರೋಹಿತ್ ಶರ್ಮಾ 42 ಹಾಗೂ ಅಂಬಟಿ ರಾಯುಡು 6 ರನ್ ಬಾರಿಸಿದ್ದಾರೆ.  

click me!