ಟೇಲರ್ ದಾಖಲೆಗೆ ಬ್ರೇಕ್ ಹಾಕಿದ ಚಹಲ್; 6 ವಿಕೆಟ್ ಪತನ

By Web Desk  |  First Published Jan 23, 2019, 9:50 AM IST

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ನಾಯಕ ಕೇನ್ ವಿಲಿಯಮ್ಸನ್ ವೃತ್ತಿ ಜೀವನದ 36ನೇ ಅರ್ಧಶತಕ ಪೂರೈಸಿದರು. 63 ಎಸೆತಗಳನ್ನು ಎದುರಿಸಿ ವಿಲಿಯಮ್ಸನ್ 50 ರನ್ ಬಾರಿಸಿದರು.


ನೇಪಿಯರ್[ಜ.23]: ಏಕದಿನ ಕ್ರಿಕೆಟ್’ನಲ್ಲಿ ಸತತ 6 ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ನ್ಯೂಜಿಲೆಂಡ್’ನ ಅನುಭವಿ ಬ್ಯಾಟ್ಸ್’ಮನ್ ರಾಸ್ ಟೇಲರ್ ಬ್ಯಾಟಿಂಗ್ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚಹಲ್ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಟಾಮ್ ಲಾಥಮ್ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಪಡೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. 30 ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದೆ.

ನ್ಯೂಜಿಲೆಂಡ್’ಗೆ ಆರಂಭದಲ್ಲೇ ಶಾಕ್ ಕೊಟ್ಟ ಭಾರತ; ಪಠಾಣ್ ದಾಖಲೆ ಮುರಿದ ಶಮಿ

Latest Videos

undefined

ಆರಂಭದಲ್ಲೇ ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿ ಆತಿಥೇಯರಿಗೆ ಶಾಕ್ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಮಿಂಚಿದ್ದ ಚಹಲ್ ಅಂತಹದ್ದೇ ಪ್ರದರ್ಶನವನ್ನು ಕಿವೀಸ್ ವಿರುದ್ಧವೂ ಮುಂದುವರೆಸಿದ್ದಾರೆ. 15ನೇ ಓವರ್’ನಲ್ಲಿ ರಾಸ್ ಟೇಲರ್[24] ಅವರನ್ನು ಕಾಟ್ ಅಂಡ್ ಬೌಲ್ಡ್ ಮಾಡುವ ಮೂಲಕ ಚಹಲ್ ಕಿವೀಸ್’ಗೆ ಬಿಗ್ ಶಾಕ್ ನೀಡಿದರು. ಇದರ ಬೆನ್ನಲ್ಲೇ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಟಾಮ್ ಲಾಥಮ್ ಅವರ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಹೆನ್ರಿ ನಿಕೋಲಸ್’ಗೆ ಕೇದಾರ್ ಜಾದವ್ ಪೆವಿಲಿಯನ್ ಹಾದಿ ತೋರಿಸಿದರೆ, ಮಿಚೆಲ್ ಸ್ಯಾಂಟರ್ ಆಟವನ್ನು ಶಮಿ 14ರನ್’ಗಳಿಗೆ ನಿಯಂತ್ರಿಸಿದರು.

ಅರ್ಧಶತಕ ಪೂರೈಸಿದ ವಿಲಿಯಮ್ಸನ್: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ನಾಯಕ ಕೇನ್ ವಿಲಿಯಮ್ಸನ್ ವೃತ್ತಿ ಜೀವನದ 36ನೇ ಅರ್ಧಶತಕ ಪೂರೈಸಿದರು. 63 ಎಸೆತಗಳನ್ನು ಎದುರಿಸಿ ವಿಲಿಯಮ್ಸನ್ 50 ರನ್ ಬಾರಿಸಿದರು.

click me!