ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ತಂಡಕ್ಕೆ ಮೊಹಮ್ಮದ್ ಶಮಿ ಆರಂಭದಲ್ಲೇ ಮಾರಕವಾಗಿ ಪರಿಣಮಿಸಿದರು. ತಂಡದ ಮೊತ್ತ 18 ರನ್’ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಶಮಿ ಯಶಸ್ವಿಯಾದರು.
ನೇಪಿಯರ್[ಜ.23]: ಟೀಂ ಇಂಡಿಯಾ ಬೌಲರ್’ಗಳ ಚಾಣಾಕ್ಷ ದಾಳಿಗೆ ತತ್ತರಿಸಿದ ಆತಿಥೇಯ ನ್ಯೂಜಿಲೆಂಡ್ ತಂಡ ಕೇವಲ 157 ರನ್’ಗಳಿಗೆ ಸರ್ವಪತನ ಕಂಡಿದೆ. ಭಾರತ ಪರ ಕುಲ್ದೀಪ್ ಯಾದವ್ 4, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಲ್ 2 ಹಾಗೂ ಕೇದಾರ್ ಜಾದವ್ 1 ವಿಕೆಟ್ ಪಡೆದರು.
ಟೇಲರ್ ದಾಖಲೆಗೆ ಬ್ರೇಕ್ ಹಾಕಿದ ಚಹಲ್; 6 ವಿಕೆಟ್ ಪತನ
undefined
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ತಂಡಕ್ಕೆ ಮೊಹಮ್ಮದ್ ಶಮಿ ಆರಂಭದಲ್ಲೇ ಮಾರಕವಾಗಿ ಪರಿಣಮಿಸಿದರು. ತಂಡದ ಮೊತ್ತ 18 ರನ್’ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಶಮಿ ಯಶಸ್ವಿಯಾದರು. ಅನುಭವಿ ಬ್ಯಾಟ್ಸ್’ಮನ್ ರಾಸ್ ಟೇಲರ್ ಹಾಗೂ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಟಾಮ್ ಲಾಥಮ್ ವಿಕೆಟ್ ಕಬಳಿಸುವ ಮೂಲಕ ಚಹಲ್ ಕಿವೀಸ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ನ್ಯೂಜಿಲೆಂಡ್’ಗೆ ಆರಂಭದಲ್ಲೇ ಶಾಕ್ ಕೊಟ್ಟ ಭಾರತ; ಪಠಾಣ್ ದಾಖಲೆ ಮುರಿದ ಶಮಿ
ಮ್ಯಾಜಿಕ್ ಮಾಡಿದ ಕುಲ್ದೀಪ್: ಐದನೇ ಬೌಲರ್ ಆಗಿ ದಾಳಿಗಿಳಿದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 4 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು 160 ರನ್’ಗಳೊಳಗಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಾಯಕನ ಏಕಾಂಗಿ ಹೋರಾಟ: ನ್ಯೂಜಿಲೆಂಡ್ ತಂಡದ ನಾಯಕ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ವಿಲಿಯಮ್ಸನ್ 81 ಎಸೆತಗಳಲ್ಲಿ 7 ಬೌಂಡರಿ ಸಹಿತ 64 ರನ್ ಚಚ್ಚಿದರು. ಇದು ವಿಲಿಯಮ್ಸನ್ ಬಾರಿಸಿದ 36ನೇ ಅರ್ಧಶತಕವಾಗಿದೆ.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 157/10
ಕೇನ್ ವಿಲಿಯಮ್ಸನ್: 64
ಕುಲ್ದೀಪ್ ಯಾದವ್: 39/4
[* ನ್ಯೂಜಿಲೆಂಡ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]