ಆಸಿಸ್’ಗೆ ಆರಂಭದಲ್ಲೇ ಆಘಾತ: ಪೆವಿಲಿಯನ್ ಸೇರಿದ ಆರಂಭಿಕರು

By Web DeskFirst Published Jan 18, 2019, 9:24 AM IST
Highlights

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಕುಲ್ದೀಪ್, ರಾಯುಡು ಹಾಗೂ ಸಿರಾಜ್’ಗೆ ವಿಶ್ರಾಂತಿ ನೀಡಿ ಚೆಹಾಲ್, ಕೇದಾರ್ ಜಾದವ್, ವಿಜಯ್ ಶಂಕರ್ ಸ್ಥಾನ ಕಲ್ಪಿಸಲಾಗಿದೆ.

ಮೆಲ್ಬರ್ನ್[ಜ.18]: ಭಾರತ-ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಮೇಲುಗೈ ಸಾಧಿಸಿದ್ದು, ಆಸ್ಟ್ರೇಲಿಯಾದ ಆರಂಭಿಕರಿಬ್ಬರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗಿದ್ದಾರೆ.

ಅಂತಿಮ ಏಕದಿನ ಪಂದ್ಯಕ್ಕೆ ಬಲಿಷ್ಠ ಆಸಿಸ್ ತಂಡ ಪ್ರಕಟ.! 2 ಬದಲಾವಣೆ

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಕುಲ್ದೀಪ್, ರಾಯುಡು ಹಾಗೂ ಸಿರಾಜ್’ಗೆ ವಿಶ್ರಾಂತಿ ನೀಡಿ ಚೆಹಾಲ್, ಕೇದಾರ್ ಜಾದವ್, ವಿಜಯ್ ಶಂಕರ್ ಸ್ಥಾನ ಕಲ್ಪಿಸಲಾಗಿದೆ. ತಮಿಳುನಾಡು ಮೂಲದ ಆಲ್ರೌಂಡರ್ ವಿಜಯ್ ಶಂಕರ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು.  ಮೂರನೇ ಓವರ್’ನಲ್ಲಿ ಭುವಿ, ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಅಲೆಕ್ಸ್ ಕ್ಯಾರಿ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಕೆಲಹೊತ್ತಿನಲ್ಲೇ ಉತ್ತಮ ಆಟದ ಮುನ್ಸೂಚನೆ ನೀಡಿದ್ದ ಆ್ಯರೋನ್ ಫಿಂಚ್ ಅವರನ್ನು ಎಲ್’ಬಿ ಬಲೆಗೆ ಕೆಡುವುವಲ್ಲಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಯಶಸ್ವಿಯಾದರು. 

10 ಓವರ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 30 ರನ್ ಬಾರಿಸಿದ್ದು. ಖ್ವಾಜಾ 8 ಹಾಗೂ ಶಾನ್ ಮಾರ್ಷ್ 2 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲೂ 2 ಬದಲಾವಣೆ ಮಾಡಲಾಗಿದ್ದು, ಬಿಲ್ಲಿ ಸ್ಟ್ಯಾನ್’ಲೇಕ್ ಹಾಗೂ ಆ್ಯಡಂ ಜಂಪಾ ತಂಡ ಕೂಡಿಕೊಂಡಿದ್ದಾರೆ. 

click me!
Last Updated Jan 18, 2019, 9:30 AM IST
click me!