ಅಂತಿಮ ಏಕದಿನ ಪಂದ್ಯಕ್ಕೆ ಬಲಿಷ್ಠ ಆಸಿಸ್ ತಂಡ ಪ್ರಕಟ.! 2 ಬದಲಾವಣೆ

By Web DeskFirst Published Jan 17, 2019, 6:21 PM IST
Highlights

ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಿವೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 34 ರನ್’ಗಳಿಂದ ಜಯಿಸಿದರೆ, ಅಡಿಲೇಡ್’ನಲ್ಲಿ ನಡೆದ 2ನೇ ಪಂದ್ಯವನ್ನು ಭಾರತ 6 ವಿಕೆಟ್’ಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು.

ಮೆಲ್ಬರ್ನ್[ಜ.17]: ಭಾರತ ವಿರುದ್ಧ ಅಂತಿಮ ಏಕದಿನ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಆ್ಯಡಂ ಜಂಪಾ ಹಾಗೂ ಬಿಲ್ಲಿ ಸ್ಟ್ಯಾನ್’ಲೇಕ್ ತಂಡಕೂಡಿಕೊಂಡಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ಜೇಸನ್ ಬೆಹ್ರೆಂಡ್ರಾಪ್ ಬದಲಿಗೆ ಸ್ಟ್ಯಾನ್’ಲೇಕ್ ತಂಡದಲ್ಲಿ ಸ್ಥಾನ ಪಡೆದರೆ, ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ನೇಥನ್ ಲಯನ್ ಕೈಬಿಟ್ಟು ಆ್ಯಡಂ ಜಂಪಾಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಮತ್ತೋರ್ವ ವೇಗಿ ಕೇನ್ ರಿಚರ್ಡ್’ಸನ್ ಅವರಿಗೂ ತಂಡದಿಂದ ಬುಲಾವ್ ಬಂದಿದೆ.

ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ?

ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಿವೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 34 ರನ್’ಗಳಿಂದ ಜಯಿಸಿದರೆ, ಅಡಿಲೇಡ್’ನಲ್ಲಿ ನಡೆದ 2ನೇ ಪಂದ್ಯವನ್ನು ಭಾರತ 6 ವಿಕೆಟ್’ಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಇದೀಗ ಅಂತಿಮ ಹಾಗೂ ನಿರ್ಣಾಯಕ ಪಂದ್ಯವು ಶುಕ್ರವಾರ[ಜ.18] ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದ್ದು, ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.   

ಆಸ್ಟ್ರೇಲಿಯಾ ತಂಡ ಹೀಗಿದೆ:
ಆ್ಯರೋನ್ ಫಿಂಚ್[ನಾಯಕ], ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್’ಕಂಬ್, ಮಾರ್ಕಸ್ ಸ್ಟೋನಿಸ್, ಗ್ಲೇನ್ ಮ್ಯಾಕ್ಸ್’ವೆಲ್, ಜೇ ರಿಚರ್ಡ್’ಸನ್, ಪೀಟರ್ ಸಿಡಲ್, ಆ್ಯಡಂ ಜಂಪಾ, ಕೇನ್ ರಿಚರ್ಡ್’ಸನ್, ಬಿಲ್ಲಿ ಸ್ಟ್ಯಾನ್’ಲೇಕ್.  
 

click me!
Last Updated Jan 17, 2019, 6:21 PM IST
click me!